ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕ, ಬ್ಲಡ್ ಹೆಲ್ಪ್ಕೇರ್ ಕರ್ನಾಟಕ (ರಿ.) ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ ರಕ್ತ ನಿಧಿ ಮಂಗಳೂರು ಸಹಯೋಗದಲ್ಲಿ 80 ನೇ ಬೃಹತ್ ರಕ್ತದಾನ ಶಿಬಿರ ಉಳ್ಳಾಲ ಕೋಟೆಪುರ ಟಿಪ್ಪು ಸುಲ್ತಾನ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಮುಡಿಪು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ನಿಷ್ಕಳಂಕವಾಗಿರುವ ಸಮಾಜ ಸೇವೆಯ ತುಡಿತ ದೇವರ ಸಂತೃಪಿಗೆ ಪಾತ್ರವಾಗಲಿದೆ, ಸಾವಿರಾರು ರೋಗಿಗಳು ದಿನ ನಿತ್ಯ ರಕ್ತದ ಸಮಸ್ಯೆಯಿಂದ ಬಳಲುತ್ತಿದ್ದು ಅಂತವರಿಗೆ ರಕ್ತವನ್ನು ಪೂರೈಸಲು ಇಂತಹ ಸಮಾಜಮಿಖಿ ಕಾರ್ಯದಿಂದ ಸಾದ್ಯ. ಹೆಚ್ಚು ಹೆಚ್ಚು ಯುವಕರು ರಕ್ತದಾನ ಮಾಡುವ ಮೂಲಕ ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಅಧ್ಯಕ್ಷ ನಝೀರ್ ಹುಸೈನ್ ಮಾತನಾಡಿ ನಾವು ಸುಮಾರು 3 ವರ್ಷದಲ್ಲಿ ,80 ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ, ವಿವಿಧ ಆಸ್ಪತ್ರೆಗಳಿಗೆ ಸುಮಾರು ,4,000 ದಿಂದ 5,000 ಯುನಿಟ್ ನಷ್ಟು ರಕ್ತವನ್ನು ಸಂಗ್ರಹಿಸಿ ಕೊಟ್ಟಿದ್ದೇವೆ, ಕೊರೋನಾ ಸಂದರ್ಭದಲ್ಲೂ ರಕ್ತದ ಅವಶ್ಯಕತೆ ಇರುವವರಿಗೆ ರಕ್ತವನ್ನು ಪೂರೈಸಿದ್ದೇವೆ, ನಾವು ಸೃಷ್ಠಿಕರ್ತನ ಅನುಗ್ರಹಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದೇವೆ, ಮುಂದೆಯೂ ಕರ್ನಾಟಕ ರಕ್ಷಣಾ ವೇದಿಕೆಯ ಸಹಕಾರ, ಪ್ರೋತ್ಸಾಹ ಬೇಕೆಂದು ಹೇಳಿದರು.
ಕೆ.ಎಂ.ಸಿ ರಕ್ತ ನಿಧಿ ವಿಭಾಗದ ತಾಂತ್ರಿಕ ಮುಖ್ಯಸ್ಥೆ ಶ್ರೀ ಜಿ.ಥೋಮಸ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಎ.ಕೆ.ಮೊಯಿದಿನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಲಹೆಗಾರರಾದ ಸುಲೈಮಾನ್ ಶೇಕ್ ಬೆಳುವಾಯಿ,ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕದ ಅಧ್ಯಕ್ಷ ಫೈರೋಝ್ ಡಿ.ಎಂ, ಕಾರ್ಯದರ್ಶಿ ಮುರುಗೇಶ್ ಉಳ್ಳಾಲ್, ಸದಸ್ಯರಾದ ಇಫ್ತಿಕಾರ್ ಅಹ್ಮದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ , ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ,ಕೋಶಾಧಿಕಾರಿ ಸತ್ತಾರ್ ಪುತ್ತೂರು, ಕಾರ್ಯದರ್ಶಿ ಬಶೀರ್ ಮಂಗಳೂರು, ಮಾದ್ಯಮ ಕಾರ್ಯದರ್ಶಿ ಜಲೀಲ್ ಉಳ್ಳಾಲ, ರಕ್ತ ಪೂರೈಕೆ ವಿಭಾಗದ ಉಸ್ತುವಾರಿ ಮುಸ್ತಫ ಕೆ.ಸಿ.ರೋಡ್, ಶಿಬಿರದ ಕಾರ್ಯನಿರ್ವಾಹಕ ಅಲ್ಮಾಝ್ ಉಳ್ಳಾಲ, ಶಹಜಹಾನ್ ಮುಕ್ಕ , ಖಾದರ್ ಮುಂಚೂರು,ರಾಫೀಝ್ ಕೃಷ್ಣಾಪುರ, ಮೊದಲಾದವರು ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಸಂಚಾಲಕರಾದ ಶಂಶುದ್ದೀನ್ ಬಳ್ಕುಂಜೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯನಿರ್ವಾಹಕರಾದ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.