ಮುಂಬಯಿ: ಮುಂಬಯಿಯ ಪ್ರಸಿದ್ಧ ಸಮಾಜಸೇವಕ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‌ನ ನಿರ್ದೇಶಕ ಕರ್ನಿರೆ ಗಂಗಾಧರ್ ಅಮೀನ್ ಅವರು 25 ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಂಕಣ್ ಸ್ವಾದ್ (ಗೋಮಂತಕ್ ಸೀ ಫುಡ್) ಕ್ಯಾಶುಯಲ್ ಹೊಟೇಲಿಗೆ 2025 ರ ಟೈಮ್ಸ್ ಫುಡ್ ಆಂಡ್ ನೈಟ್‌ಲೈಫ್ ಪ್ರಶಸ್ತಿ ದೊರಕಿದೆ.
ಕಳೆದ ಶನಿವಾರ (ಮಾ. 29) ರಂದು ಅಂಧೇರಿ ಪೂರ್ವದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಐಟಿಸಿ ಮರಾಠ ಹೋಟೆಲ್ ಸಭಾಂಗಣದಲ್ಲಿ ಟೈಮ್ಸ್ ಸಮೂಹ ಅಯೋಜಿಸಿದ ಪ್ರಶಸ್ತಿ ಸಮಾರಂಭದಲ್ಲಿ ಕೊಂಕಣ್ ಸ್ವಾದ್ ಸಮೂಹ ಹೋಟೇಲಿನ ಕರ್ನಿರೆ ಗಂಗಾಧರ್ ಎನ್ ಅಮೀನ್, ಕರಣ್ ಶೆಟ್ಟಿ, ಐಶ್ವರ್ಯಾ ಗಂಗಾಧರ್ ಅಮೀನ್ ಸ್ವೀಕರಿಸಿದರು.
ಕೊಂಕಣ್ ಸ್ವಾದ್ ಹೋಟೇಲು ಮುಂಬಯಿಯ ಅತ್ಯುತ್ತಮ ಕಡಲು ತಿನಿಸುಗಳಿಗೆ (ಸೀ ಫುಡ್) ಅತ್ಯಂತ ಗುಣಮಟ್ಟದ ಡೈನಿಂಗ್ (ಆಹಾರ) ಮತ್ತು ಅತ್ಯುತ್ತಮ ಕರಾವಳಿ ಗುಣಮಟ್ಟದ ಆಹಾರ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೆಮ್ಮೆ ತಂದಿದ್ದಾರೆ. ಅತ್ಯುತ್ತಮ ಸಮುದ್ರಾಹಾರವನ್ನು ಪೂರೈಸಲು ಮತ್ತು ಕರಾವಳಿ ಪಾಕಪದ್ಧತಿಯನ್ನು ಉತ್ತೇಜಿಸಲು ಅವರ 25 ವರ್ಷಗಳ ಕಠಿಣ ಪರಿಶ್ರಮವು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಗೋರೆಗಾಂವ್ ಪಶ್ಚಿಮದ ಲಿಂಕ್ ರೋಡ್‌ನಲ್ಲಿ ಪ್ರಾರಂಭಗೊಂಡ ಹೋಟೆಲ್ ಇದೀಗ ಅಂಧೇರಿ ಪೂರ್ವದಲ್ಲಿ ಜೋಗೇಶ್ವರಿ ಪಶ್ಚಿಮದ ಲಿಂಕ್ ರೋಡಿನಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ’ಕೊಂಕಣ್ ಸ್ವಾದ್’ ‘ಗೋಮಂತಕ್ ಸೀ ಫುಡ್ ’ ಪ್ರಸಿದ್ಧವಾಗಿದೆ.