ಕಟಪಾಡಿ: ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಗಾಗಿ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಐರಿನ್ ಪಿರೇರಾ ಹಾಗೂ ಗ್ಲೋರಿಯ ಪಿಂಟೊ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿದ್ದು, ಹೊಸ ನಿರ್ದೇಶಕರಾಗಿ ಗೊಡ್ಫ್ರಿ ಡಿಸೋಜಾ, ವಿಲಿಯಂ ಲೋಬೊ, ಆಸ್ಟಿನ್ ಕರ್ಡೋಜಾ, ಜೆರೊಮ್ ಕಸ್ತೆಲಿನೊ, ಲಾರೆನ್ಸ್‌ ಕ್ರಾಸ್ಟೊ, ರೊನಾಲ್ಡ್ ಮಾಚಾದೊ, ಶಾಂತಿ ಕ್ವಾಡ್ರಸ್, ಮೇರಿ ಡಿಸಿಲ್ವ ಆಯ್ಕೆಯಾಗಿದ್ದಾರೆ.