ಕಿನ್ನಿಗೋಳಿ: ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಕೆಲಸ ನಿರಂತರ ನಡೆಯಬೇಕು ಎಂದು ಮೆನ್ನಬೆಟ್ಟು ಪಂಚಾಯತ್ ಮಾಜಿ ಅಧ್ಯಕ್ಷರು ಗೋವಿಂದ ಪೂಜಾರಿ ಅವರು ಹೇಳಿದರು.
ಅವರು ಸಮಗ್ರ ಶಿಕ್ಷಣ ಕರ್ನಾಟಕ ಸರಕಾರ ಕ್ಷೇತ್ರ ಸಮನ್ವಯಧಿಕಾರಿ ಕಚೇರಿ ಬಲ್ಮಠ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಉಲ್ಲಂಜೆ ಕ್ಲಸ್ಟರ್ ವತಿಯಿಂದ ನಡುಗೋಡು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬದಲ್ಲಿ ಮಾತನಾಡಿ ಮಕ್ಕಳು ಯಾವುದೇ ರೀತಿಯಲ್ಲಿ ದಾರಿ ತಪ್ಪದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ ನಮ್ಮ ಸಂಸ್ಕಂತಿ ಸಂಸ್ಕಾರವನ್ನು ಮೈಗೂಡಿಸುವಂತೆ ಮಾಡಿಕೊಳ್ಳಬೇಕು ಇದು ಶಿಕ್ಷಕರ ಜವಾಬ್ದಾರಿಯೂ ಆಗಿದೆ ಎಂದರು.
ಧಾರ್ಮಿಕ ಪರಿಷ್ಯತ್ ಸದಸ್ಯ ಭುವನಾಭಿರಾಮ ಉಡುಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಕರ್ನಲ್ ತಮ್ಮಯ್ಯ, ಹರಿಶ್ಚಂದ್ರ ಆಚಾರ್ಯ, ಕೃಷ್ಣರಾಜ ಭಟ್, ಕ್ಷೇತ್ರ ಸಂಪನ್ಮೂಲ ಬಿ.ಆರ್.ಪಿ ಹರಿಪ್ರಸಾದ್, ಸಿ.ಆರ್.ಪಿ ರಾಮದಾಸ್ ಭಟ್, ಮೂರು ಕ್ಲಸ್ಟರ್ ನ ಸಮನ್ವಯಗಾರ ಸುಂದರ ತೊಡರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾ ರವೀಂದ್ರ ಶೆಟ್ಟಿ, ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪದ್ಯಾಯನಿ ದುಲ್ಸೆನ್ ಮತ್ತಿತರರು ಉಪಸ್ಥಿತರಿದ್ದರು. ಪ್ರೌಢ ಶಾಲೆಯ ಮುಖ್ಯೋಪದ್ಯಯನಿ ಶಾಂತಿ ಭಟ್ ಸ್ವಾಗತಿಸಿದರು. ಸೀತಾ ಚಂದ್ರಿಕ ನಿರೂಪಿಸಿದರು, ಜಯಪೌಲ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಒಟ್ಟು ಐದು ಶಾಲೆಗಳ ವಿದ್ಯಾರ್ಥಿಗಳು ಬಾಗವಹಿಸಿದರು ಸಂಪನ್ಮೂಲ ವ್ಯಕ್ತಿಗಳಾಗಿ ಐರಿನ್ ಡಿಸೋಜ, ಸ್ಮಿತಾ, ರತ್ನಾವತಿ, ವಿದ್ಯಾ ಟಿ, ಬಾಗವಹಿಸಿದರು.