ಕಿನ್ನಿಗೋಳಿ:  ಐಕಳ ಬಾವ ಕಾಂತಬಾರೆ ಬೂದಾಬಾರೆ ಜೋಡುಕೆರೆ ಕಂಬಳ ಸಮಿತಿ ಮತ್ತು ಐಕಳ ಬಾವ ಫ್ರೆಂಡ್ಸ್ ಕ್ಲಬ್ ವತಿಯಿಂದ ಐಕಳ ಕಂಬಳ ಗದ್ದೆಯಲ್ಲಿ ಮತ್ತು ಮಂಜೊಟ್ಟಿಯ ಗದ್ದೆಯಲ್ಲಿ ಐಕಳಉತ್ಸವ 2023 ತುಳು ಜಾನಪದ ಕ್ರೀಡಾ ಮೇಳ ಕಾರ್ಯಕ್ರಮವು 23.01. 2023 ರಂದು ಬೆಳಿಗ್ಗೆ 9:30 ಗಂಟೆಗೆ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಚಿತ್ತರಂಜನ್ ಭಂಡಾರಿ ಕಾರ್ಯದರ್ಶಿ ಐಕಳ ಬಾವ ಜೋಡು ಕರೆ ಕಂಬಳ ಸಮಿತಿ ಅವರು ನಾವು  ಕೇವಲ ಕಂಬಳದಲ್ಲಿ  ಪಾಲ್ಗೊಂಡು ಅದರ ಸಂಭ್ರಮವನ್ನು ಹೆಚ್ಚಿಸು ಸಂದರ್ಭದಲ್ಲಿ ತುಳುನಾಡಿನ ಅನೇಕ ಜಾನಪದ ಕ್ರೀಡೆಗಳಲ್ಲಿ ಪಾಲ್ಗೊಂಡು ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಮತ್ತು ಈ ಐಕಳ ಉತ್ಸವದ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆದು ತಾಲೂಕು ಮತ್ತು ಜಿಲ್ಲಾಮಟ್ಟದ ಕ್ರೀಡಾಕೂಟ ಬರುವ ವರ್ಷಗಳಲ್ಲಿ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಮುರುಳಿಧರ್ ಚಿತ್ತರಂಜನ್ ಭಂಡಾರಿ, ಸುಗುಣ ಪೂಜಾರಿ, ದುರ್ಗಾ ಪ್ರಸಾದ್ ಶೆಟ್ಟಿ , ಕೃಷ್ಣ ಮಾರ್ಲ, ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ಚೇತನ್ ಶೆಟ್ಟಿ ನಿರೂಪಿಸಿದರು.