ಪೆರ್ನಾಜೆ:  ಹಿರಿಯ ಸಾಹಿತಿಗಳ ಮುಂದೆ ನಾವು ಕುಬ್ಜರಾಗಿ ಕಾಣುತ್ತೇವೆ. ನಮ್ಮಲ್ಲಿ ಭಾಷಾ ಪದಪ್ರಯೋಗ ಎಲ್ಲೆಂದರಲ್ಲಿ ಇಂಗ್ಲಿಷ್ ಬಳಕೆಯಾಗುತ್ತಿದೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಉದಯೋನ್ಮುಖ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ ಪಂಚಾಯಿತಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಅವಕಾಶ ನೀಡುತ್ತಿದ್ದು ಇದು ಮೊದಲನೆಯ ಕಾರ್ಯಕ್ರಮ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ  ಸಾಂತ್ಯ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಚೇರಿ,  ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು ಸಹಯೋಗದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ  ಸಂಯೋಜಕತ್ವದಲ್ಲಿ   ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಗ್ರಾಮದಲ್ಲಿ  ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮ ಜ:22ರಂದು ನೆಟ್ಟಣಿಗೆ ಮುಡ್ನೂರು  ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಾಹಿತ್ಯ ಎಂದರೇನು? ಸಾಹಿತ್ಯ   ಸತ್  ಚಿಂತನೆ ಜನರಿಗೆ ಹಿತವಾದದ್ದು ಎಂದು ತಿಳಿಸುತ್ತಾ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸನ್ಮಾನಿತರ ಬಗ್ಗೆ  ಶ್ರೀ ಗಜಾನನ ಪದವಿಪೂರ್ವ ಕಾಲೇಜ್ ಈಶ್ವರಮಂಗಳ  ಪ್ರಾಂಶುಪಾಲರಾದ ಶಾಮಣ್ಣ ಮುಖ್ಯ ಅತಿಥಿಗಳಾಗಿ   ಮೆಚ್ಚುಗೆ ನುಡಿದರು.

ಇನ್ನೋರ್ವ ಮುಖ್ಯ ಅತಿಥಿ ಜೇನು ಕೃಷಿ ತಜ್ಞ ಸಾಹಿತಿ ಕುಮಾರ್ ಪೆರ್ನಾಜೆ ಹಣ್ಣೆಲೆ ಉದುರಿದಾಗ ಚಿಗುರೆಲೆ ನಗುತ್ತದೆ ಎಂಬ ಹಿರಿಯರ ಮಾತು ಅಕ್ಷರ ಶಃ ಸತ್ಯ ಮಕ್ಕಳು ದೊಡ್ಡ ದೊಡ್ಡ ಅವಕಾಶಗಳಿಗಾಗಿ ಕಾಯದೆ ಸಿಕ್ಕ ಅವಕಾಶವನ್ನು ಬಳಸಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕೆಂದು ನುಡಿದರು.

ಸಂದೇಶ್ ಕೆ ಆರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು ಸಂದರ್ಭೋಚಿತವಾಗಿ ಹಿತ ನುಡಿದರು.

ಸಮಾರಂಭದ ಅಧ್ಯಕ್ಷರು ಕ.ಸಾ.ಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಗ್ರಾಮೀಣ ಪ್ರತಿಭೆ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಕಥೆ ಕವನಗಳನ್ನು ರಚಿಸುವಲ್ಲಿ ತೊಡಗಿಸುವಂತೆ ಪ್ರೇರೇಪಿಸುವ ಬಗ್ಗೆ ಪ್ರತಿ ಗ್ರಾಮ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ತಿಳಿಸಿದರು.

ಸಾ .ಹಿ. ಪ್ರಾ  ಪ್ರಾಥಮಿಕ ಶಾಲೆ, ಕರ್ನೂರು ಪ್ರಭಾರ  ಮುಖ್ಯ ಗುರುಗಳು ಆದ ರಮೇಶ್ ಶಿರ್ಲಾಲು  ನೆಟ್ಟಣಿಗೆ ಮುಡ್ನೂರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  ನಾಟಿ ವೈದ್ಯ ಮತ್ತು ಹಿರಿಯ ಸಾಹಿತಿಗಳಾದ ಶಂಕರನಾರಾಯಣ ಭಟ್, ಜೇನುಕೃಷಿ ಮತ್ತು ಸಾಹಿತಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ, ನಾಟಕ ರಚನೆ ಮತ್ತು ಕಲಾವಿದ ರಾಮ ಈಶ್ವರಮಂಗಲ, ಚಿತ್ರಕಲಾ ಕಲಾವಿದ ನಿಯಾಜ್ ಆಲಿ ಬಿ.ಎಂ., ನಿವೃತ್ತ ಮುಖ್ಯಗುರು ಹಾಗೂ ಯೋಗ ಶಿಕ್ಷಕ ಸದಾಶಿವ ರೈ ಎಸ್.ಎನ್., ಕರ್ನೂರು ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯಗುರು ಪದ್ಮನಾಭ ರೈ ಬೆದ್ರಾಡಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಪತ್ರಕರ್ತರು ಜೇನು ಕೃಷಿ ಸಾಧಕರು ಆಗಿರುವ ಶ್ರೀಯುತ ಕುಮಾರ್ ಪೆರ್ನಾಜೆ ರವರ ವೈವಾಹಿಕ ಜೀವನದ 25ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮವನ್ನು ನೆಟ್ಟಣಿಗೆ ಮುಡ್ನೂರು ಗ್ರಾಮದ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ರೀತಿಯಲ್ಲಿ ಕನ್ನಡದ ಗೌರವ ದ ಸನ್ಮಾನ ಚಿಗುರೆಲೆ  ಸಾಹಿತ್ಯ  ಬಳಗ ಸಾಕ್ಷಿ ಆಯ್ತು.  ಸಾಹಿತ್ಯಕ್ಕೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಡುಗೆ ಹಾಗೂ ಜನಮಾನಸದಲ್ಲಿ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಚಿಂತಕರಾದ ಪೂರ್ಣಾತ್ಮಾರಾಮ್ ನೀಡಿದರು.

ಬಾಲಕಥಾ ಗೋಷ್ಠಿ,  ಬಾಲಕವಿ ಗೋಷ್ಠಿ , ಯುವ ಕವಿಗೋಷ್ಠಿ ನಡೆದಿದ್ದು ಗ್ರಾಮದ ಪುಟಾಣಿ ಸಾಹಿತಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಿತ್ರಕಲಾ ಪ್ರದರ್ಶನಗೊಂಡಿತು.

ಶ್ರೀ ಗಜಾನನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.  ರಹನ ಎಂ ಸ್ವಾಗತಿಸಿದರು. ಚಿಗುರಲೆ ಸಾಹಿತಿ ಬಳಗ ಪುತ್ತೂರು ಇದರ ನಿರ್ವಾಹಕರಾದ ಅಪೂರ್ವ ಕಾರಂತ್ ಪ್ರಸ್ತಾವಿಕ ನುಡಿದರು, ನಾರಾಯಣ ಕುಂಬ್ರ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು ನೆಟ್ಟಣಿಗೆ ಮುಡ್ನೂರು ಪ್ರೌಢಶಾಲೆ ದೇವಿ ಪ್ರಕಾಶ್ ಕುತ್ತ್ಯಾಳ ಸಭಾ ಕಾರ್ಯಕ್ರಮ ನಿರೂಪಣೆ ಮಾಡಿದರು.

ರಹನ ಎಂ ಹಾಗೂ ಅಪೂರ್ವ ಕಾರಂತ್  ಕಾರ್ಯಕ್ರಮದ ಸಂಯೋಜನೆ ಮಾಡಿದರು.