ಉಡುಪಿ ಎಪ್ರಿಲ್ 16:  ಉಡುಪಿ ಜಿಲ್ಲೆಯಲ್ಲಿ ಕೋವಿಡ್ 2 ಅಲೆ ಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾ ತಜ್ಞರ ಸಮಿತಿ ಸಭೆಯು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ  ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ರಾಜ್ಯದೆಲ್ಲಡೆ ಕೋವಿಡ್  2 ಅಲೆ ವ್ಯಾಪಕವಾಗಿದ್ದು, ಜಿಲ್ಲೆಯಲ್ಲಿಯೂ ಸಹ ಹರಡುತ್ತಿದೆ, ಇದನ್ನು ನಿಯಂತ್ರಿಸುವ ಕುರಿತಂತೆ ಜಿಲ್ಲೆಯಲ್ಲಿ , ಹೆಚ್ಚಿನ ಸಂಖ್ಯೆಯಲ್ಲಿ  ತಪಾಸಣೆ, ಪತ್ತೆ ಹಚ್ಚುವಿಕೆ , ಚಿಕಿತ್ಸೆ  ನೀಡುವುದನ್ನು ಶೀಘ್ರವಾಗಿ ಕೈಗೊಳ್ಳಬೇಕು, ಹೈದಯ ಸಂಬAದಿ ರೋಗಿಗಳು, ಕಿಡ್ನಿ ಸಮಸ್ಯೆಯಿರುವವರು, ಕ್ಯಾನ್ಸರ್ ರೋಗಿಗಳು  ಕೋವಿಡ್ ನಿಂದ ಮರಣ ಹೊಂದುವುದು ಅಧಿಕವಾಗಿದ್ದು, ಇಂತಹ ರೋಗಿಗಳನ್ನು 15 ದಿನಗಳಿಗೊಮ್ಮೆ ನಿಯಮಿತವಾಗಿ ತಪಾಸಣೆ ಮಾಡುವುದರ ಮೂಲಕ  ಬೇಗ ರೋಗ ಪತ್ತೆ ಹಚ್ಚಿ ಚಕಿತ್ಸೆ ನೀಡುವುದರಿಂದ ಸಾವು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೋವಿಡ್ ಸೊಂಕಿಗೆ ಒಳಗಾಗದಂತೆ  ಆಸ್ಪತ್ರೆಗಳಲ್ಲಿ  ಇನ್ಫೆಕ್ಷನ್ ಕಂಟ್ರೋಲ್ ಮಾಡುವ  ಕುರಿತು ತರಬೇತಿ ನೀಡಬೇಕು ಎಂದು ತಜ್ಞರ ಸಮಿತಿ ತಿಳಿಸಿತು.

ಜಿಲ್ಲೆಯಲ್ಲಿ  ಕೋವಿಡ್ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ರೆಮಿಡಿಸಿವರ್ ಚುಚ್ಚುಮದ್ದಿನ ಬಳಕೆಯನ್ನು  ಎಚ್ಚರಿಕೆಯಿಂದ ಬಳಸಬೇಕು,ಕೋವಿಡ್ ಲಸಿಕೆ, ಮಾಸ್ಕ್ ಗಳು, ಪಿಪಿಇ ಕಿಟ್, ಆಕ್ಸಿಜಿನ್ ಕೊರತೆಯದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಹೊಂದಿರಬೇಕು ಎಂದು ಸಮಿತಿಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಎಂಐಟಿ ಯಲ್ಲಿ ಕಂಟೈನ್ಮೆಂಟ್ ಝೋನ್ ರಚಿಸಿ  ಕೋವಿಡ್ ನಿಯಂತ್ರಣಕ್ಕೆ ತಂದ ಕ್ರಮದ ಕುರಿತು ಪ್ರಧಾನ ಮಂತ್ರ‍್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ , ಕೋವಿಡ್ ಪ್ರಕರಣಗಳು ಇದೇ ರೀತಿಯ ನಿಯಂತಣ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆಯಂತೆ ಅಗತ್ಯ ಪ್ರಮಾಣದ ಬೆಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು,  ತಮ್ಮಲ್ಲಿ ಗೆ ಬರುವ ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಕುರಿತು ಮಾಹಿತಿ ನೀಡಬೇಕು , ಎಲ್ಲಾ ಖಾಸಗಿ ಸಂಸ್ಥೆಗಳು , ಮಾಲ್ ಗಳು , ಶಿಕ್ಷಣ ಸಂಸ್ಥೆಗಳು , ಹೋಟೆಲ್ ಗಳು,   ಸೇರಿದಂತೆ  ಎಲ್ಲಡೆ ಕೋವಿಡ್ ಪರೀಕ್ಷೆ ನಡೆಸಲು  ಅಗತ್ಯ ಸಹಕಾರ ನೀಡಬೇಕು ಇಲ್ಲವಾದಲ್ಲಿ ಅಂತಹವರ ವಿರುದ್ದ ಎಮಿಡಮಿಕ್ ಕಾಯಿದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. 

ಜಿಲ್ಲೆಯಲ್ಲಿ ಬೆಡ್ ಗಳ ಕೊರೆತೆ ಕಂಡುಬರದoತೆ  ಬೆಡ್ ಮೆನೇಜ್‌ಮೆಂಟ್ ವ್ಯವಸ್ಥೆ ಯನ್ನು ಆಯೋಜಿಸಲಾಗಿದೆ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಬೆಡ್ ಗಳ ವಿವರಗಳನ್ನು ಪ್ರತೀದಿನ ಮಾಹಿತಿ ನೀಡಬೇಕು , ಆಂಬುಲೆನ್ಸ್ ಗಳ ಕೊರತೆಯಾಗದಂತೆ ಆಂಬುಲೆನ್ಸ್ ಮೆನೇಜ್‌ಮೆಂಟ್ ವ್ಯವಸ್ಥೆ ಮಾಡಲಾಗಿದ್ದು, ತಕ್ಷಣದಲ್ಲಿ ಅಂಬುಲೆನ್ಸ್ ಗಳ ಸೇವೆ ದೊರೆಯುವಂತೆ ಮಾಡಲಾಗಿದೆ  ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು, ಉಪ ವಿಬಾಗಾಧಿಕಾರಿ ರಾಜು, ಡಿಹೆಚ್ ಓ ಡಾ. ಸುದೀರ್ ಚಂಧ್ರ ಸೂಢಾ, ಜಿಲ್ಲಾ ಕೋವಿಡ್ ನೋಢೆಲ್ ಅಧಿಕಾರಿ ಡ. ಪ್ರಶಾಂತ ಭಟ್, ಜಿಲ್ಲಾ ತಜ್ಞರ ಸಮಿತಿಯಲ್ಲಿನ  ವೈದ್ಯರುಗಳು , ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.