ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ. 21 ರಿಂದ 28 ರ ವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು.
ಶುಕ್ರವಾರ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜ ಪೂಜೆ, ಧ್ವಜಾರೋಹಣ, ತೈಲಾಭಿಷೇಕ, ಮಹಾಪೂಜೆ, ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ ನೆರವೇರಿತು.
ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಉಪಾಧ್ಯಕ್ಷೆ ಊರ್ಮಿಳಾರಮೇಶ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಜಗದೀಪ್ ಡಿ. ಸುವರ್ಣ, ಎಂ.ಶೇಖರ್ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ.ಸುವರ್ಣ, ಸದಸ್ಯರಾದ ಕೃತಿನ್ ಅಮೀನ್, ವೇದಕುಮಾರ್, ಎನ್ ಹರೀಶ್ಚಂದ್ರ, ಎಚ್.ಎಸ್ ಜೈರಾಜ್, ಲೀಲಾಕ್ಷ ಕರ್ಕೇರ, ಚಂದನ್‌ದಾಸ್, ಗೌರವಿ ಪಿ.ಕೆ., ಕಿಶೋರ್ ದಂಡೇಕೇರಿ, ಲತೀಶ್ ಸುವರ್ಣ, ಬಿ.ವಾಸುದೇವ ಕೋಟ್ಯಾನ್ ಮೊದಲಾದವರಿದ್ದರು.
26 ರಂದು ಮಹಾಶಿವರಾತ್ರಿ
26 ರಂದು ಮಹಾಶಿವರಾತ್ರಿ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಗ್ಗೆ 9.30ಕ್ಕೆ ಉಮಾಮಹೇಶ್ವರ ಹೋಮ, 11ಕ್ಕೆ ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ, 12.15ಕ್ಕೆ ಮಹಾಪೂಜೆ, ರಾತ್ರಿ 8ಕ್ಕೆ ಸೇವಾ ರಥೋತ್ಸವ, 10ಕ್ಕೆ ವಿಷ್ಣುಬಲಿ ಉತ್ಸವ ಮತ್ತು ರಥೋತ್ಸವ, ರಾತ್ರಿ 1ಗಂಟೆಗೆ ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನೆರವೇರಲಿದೆ. 27ರ ಮದು ಬೆಳಗ್ಗೆ 10ಕ್ಕೆ ತತ್ವ ಹೋಮ, 12.15ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 2ರಿಂದ ಭೂತ ಬಲಿ, ಬಲಿಪೂಜೆ ಅವಭೃತ ಸ್ನಾನ (ಓಕುಳಿ), 28 ರಂದು ಮಧ್ಯಾಹ್ನ 11ಕ್ಕೆ ಧ್ವಜ ಅವರೋಹಣ, ರಾತ್ರಿ 7.30ಕ್ಕೆ ಗುರುಪೂಜೆ ನೆರವೇರಲಿದೆ.