ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕರ್ನಾಟಕ ಸರ್ಕಾರದ ಗೃಹ ಮಂತ್ರಿಗಳಾದ  ಡಾ.ಜಿ.ಪರಮೇಶ್ವರ್ ರವರನ್ನು ,ಹಿರಿಯ ನೇತಾರ ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಕೆ ಹರಿಪ್ರಸಾದ್ ರವರನ್ನು, ಮಂಜುನಾಥ್ ಭಂಡಾರಿಯವರನ್ನು ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಭೇಟಿ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿದರು.

ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ,ಮಂಜುಳಾ ನಾಯಕ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಮರ್ಥ್ ಭಟ್ ,ಕೊಣಾಜೆ ಪಂಚಾಯತ್ ಸದಸ್ಯೆ ಚಂಚಲಾಕ್ಷಿ  ಹಾಗೂ ನಿತಿನ್ ಬಂಗೇರ  ಮತ್ತಿತರು ಉಪಸ್ಥಿತರಿದ್ದರು.