ಮಂಗಳೂರು: ಸಾಹಿತ್ಯ ಹಾಗೂ ಪ್ರಕೃತಿ ಒಂದಕ್ಕೊಂದು ಪೂರಕ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಸಾಂಸ್ಕೃತಿಕ ವೈಶಿಷ್ಟ್ಯ ತುಳುನಾಡಿನಲ್ಲಿದೆ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವಾಗಬೇಕು ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಭಾಂಗಣದಲ್ಲಿ ಭಾನುವಾರ ಜರುಗಿದ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’ದಲ್ಲಿ ಆಶೀರ್ವಚನ ನೀಡಿದರು.
ಶಾಸ್ತ್ರ ಹಾಗೂ ಶಸ್ತ್ರಗಳು ಸಾಹಿತ್ಯದಿಂದ ಶಕ್ತಿಯಾಗುತ್ತದೆ. ಸನಾತನ ಸಂಸ್ಕೃತಿ, ಪ್ರಕೃತಿ, ಭಾಷೆ ಹಾಗೂ ಸಾಹಿತ್ಯಕ್ಕೆ ಬೇರ್ಪಡಿಸಲಾಗದ ಬಂಧವಿದೆ. ಇದರ ಉಳಿವಿಗೆ ಪ್ರಯತ್ನ ಅಗತ್ಯ. ತುಳು ಭಾಷೆ ಇಂದು ಸರ್ವವ್ಯಾಪಿಯಾಗಿದೆ. ಭಾಷೆ, ಸಂಸ್ಕೃತಿ ಬಗೆಗಿನ ಅಭಿಮಾನದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಸಂಯೋಜಕ ಡಾ.ಮಾಧವ ಎಂ.ಕೆ., ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಉಪಸ್ಥಿತರಿದ್ದರು.
ನಾಡು, ನುಡಿ, ಸಂಸ್ಕೃತಿಯ ಉಳಿವಿನಲ್ಲಿ ಭಾಷೆಯ ಮಹತ್ವ’ ಕುರಿತು ಡಾ.ಅರುಣ್ ಉಳ್ಳಾಲ್, ‘ತುಳುನಾಡಿನ ಸಾಹಿತ್ಯ ಪರಂಪರೆ’ ಕುರಿತು ತುಲು ಕಲ್ಚರ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಮಹಿ ಮುಲ್ಕಿ ವಿಚಾರ ಮಂಡಿಸಿದರು. ರಾಜೇಶ್ ಶೆಟ್ಟಿ ದೋಟ ಹಾಗೂ ಶ್ರೀಶಾವಾಸವಿ ತುಳುನಾಡ್ ಅವರಿಗೆ 'ಕಲತ ಬೊಳ್ಳಿ' ಸನ್ಮಾನ ಪ್ರದಾನಿಸಲಾಯಿತು. ಗೀತಾ ಲಕ್ಷ್ಮೀಶ್ ಸ್ವಾಗತಿಸಿ, ವಂದಿಸಿದರು. ರೇಣುಕಾ ಕಣಿಯೂರು, ನವೀನ್ ಕುಮಾರ್ ಪೆರಾರ ಕಾರ್ಯಕ್ರಮ ನಿರೂಪಿಸಿದರು.
ಆರು ತುಳು ಕೃತಿ ಬಿಡುಗಡೆ
ಕಾರ್ಯಕ್ರಮದಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು ಅವರ ‘ರುಪಾಯಿ ನೋಟು’, ಅಶೋಕ ಎನ್.ಕಡೇಶಿವಾಲಯ ಅವರ ‘ಬದ್ಕ್ ಬಾಗ್ಯೊದ ಬೊಲ್ಪು’, ರಕ್ಷಿತ್ ಬಿ.ಕರ್ಕೇರ ಅವರ ‘ಮಾಯ್ಕದ ಮೆನ್ಪುರಿ’, ಉಮೇಶ್ ಶಿರಿಯ ಅವರ ‘ಮಲ್ಲಿಗೆದ ಜಲ್ಲಿ’ ಹಾಗೂ ‘ಸಂಪಿಗೆದ ಕಮ್ಮೆನ’, ಪದ್ಮನಾಭ ಪೂಜಾರಿ ನೇರಂಬೋಳು ಅವರ ‘ಎಸಲ ಪನಿ’ ಕೃತಿ ಬಿಡುಗಡೆಗೊಂಡಿತು. ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಸದಾನಂದ ನಾರಾವಿ, ರಘು ಇಡ್ಕಿದು, ಕುಶಾಲಾಕ್ಷಿ ವಿ.ಕಣ್ವತೀರ್ಥ, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಅನುರಾಧಾ ರಾಜೀವ್ ಸುರತ್ಕಲ್, ವಿಜಯಲಕ್ಷ್ಮೀ ಕಟೀಲ್ ಅವರನ್ನು ಗೌರವಿಸಲಾಯಿತು.
ಬಾನದಾರೆ ಕವಿಗೋಷ್ಠಿ
ಸಾಹಿತಿ, ಐಲೇಸಾ ದ ವಾಯ್ಸ ಆಫ್ ಓಷನ್ ನಿರ್ದೇಶಕರಾದ ಶಾಂತಾರಾಮ್ ವಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ‘ಬಾನದಾರೆ’ ಕವಿಕೂಟ ನಡೆಯಿತು. ರವೀಂದ್ರ ಕುಲಾಲ್ ವರ್ಕಾಡಿ, ಭಾಸ್ಕರ್ ಎ.ವರ್ಕಾಡಿ, ರೇಮಂಡ್ ಡಿ’ಕುನ್ಹಾ ತಾಕೊಡೆ, ಶ್ರೀಶಾವಾಸವಿ ತುಳುನಾಡ್, ಪದ್ಮನಾಭ ಪೂಜಾರಿ ನೇರಂಬೋಳು, ರಕ್ಷಿತ್ ಬಿ.ಕರ್ಕೇರ, ಸವಿತಾ ಕರ್ಕೇರ ಕಾವೂರು, ಅಶೋಕ ಎನ್.ಕಡೇಶಿವಾಲಯ, ವಿದ್ಯಾಶ್ರೀ ಅಡೂರ್, ಸೌಮ್ಯಾ ಆರ್.ಶೆಟ್ಟಿ, ಕೆ.ಶಶಿಕಲಾ ಭಾಸ್ಕರ್ ದೈಲಾ, ನಳಿನಿ ಭಾಸ್ಕರ್ ರೈ ಮಂಚಿ, ಜಯರಾಮ ಪಡ್ರೆ, ಚಂದ್ರಹಾಸ ಕುಂಬಾರ ಬಂದಾರು, ಸುಮಂಗಲಾ ದಿನೇಶ್ ಶೆಟ್ಟಿ, ಹರೀಶ್ ಕುಮಾರ್ ಮೆಲ್ಕಾರ್, ಡಾ.ಸುರೇಶ್ ನೆಗಳಗುಳಿ, ಅನುರಾಧಾ ರಾಜೀವ್ ಸುರತ್ಕಲ್, ಪ್ರಶಾಂತ್ ಎನ್.ಆಚಾರ್ಯ, ಪದ್ಮನಾಭ ಮಿಜಾರ್, ವಿಶ್ವನಾಥ ಕುಲಾಲ್ ಮಿತ್ತೂರು, ಮಲ್ಲಿಕಾ, ಪ್ರೇಮಾ ಆರ್.ಶೆಟ್ಟಿ ಮುಲ್ಕಿ, ಅಶ್ವಿನಿ ತೆಕ್ಕುಂಜ ಕುರ್ನಾಡ್, ಗುಲಾಬಿ ಸುರೇಂದ್ರ ಸುರತ್ಕಲ್, ಉಮೇಶ್ ಶಿರಿಯ, ನಿರ್ಮಲಾ ಶೇಷಪ್ಪ ಕುಲಾಲ್, ಹಿತೇಶ್ ಕುಮಾರ್ ಎ., ಅಮರ್‌ನಾಥ್ ಪೂಪಾಡಿಕಲ್ಲ್, ನವೀನ್ ಕುಮಾರ್ ಪೆರಾರ, ಮುರಳೀಧರ ಆಚಾರ್ಯ, ಬಾಲಿನಿ ಎನ್.ಕರ್ಕೇರಾ, ಶ್ಯಾಮ್‌ಪ್ರಸಾದ್ ಭಟ್, ವಿಂದ್ಯಾ ಎಸ್.ರೈ, ಆರ್ಯನ್ ಸವಣಾಲ್ ಭಾಗವಹಿಸಿದ್ದರು.