ಬಂಟ್ವಾಳ; ಲೋರೆಟ್ಟೊ ಮಾತಾ ಚರ್ಚ್ ನ ವಾರ್ಷಿಕ ಹಬ್ಬದ ಪ್ರಯುಕ್ತ ಆದಿತ್ಯವಾರ ದಂದು ಪರಮ ಪ್ರಸಾದ ದ ಮೆರವಣಿಗೆ ಬಹಳ ಭಕ್ತಿಪೂರ್ವಕ ವಾಗಿ,ಶ್ರದ್ಧೆಯಿಂದ, ಅದ್ದೂರಿಯಾಗಿ ನಡೆಯಿತು.ಮಂಗಳೂರು ಧರ್ಮಪ್ರಾ0ತ್ಯದ  ಕೆನರಾ ಕಮ್ಯುನಿಕೇಶನ್  ಸೆಂಟರ್ ನ ನಿರ್ದೇಶಕರಾಗಿರುವ ವಂದನೀಯ ಆನಿಲ್ ಫೆರ್ನಾಂಡಿಸ್ ರವರು ಪ್ರಧಾನ ಧರ್ಮಗುರುಗಳಾಗಿ  ನೂರಾರು ಭಕ್ತಾದಿಗಳೂ0ದಿಗೆ ಬಲಿಪೂಜೆ ಯನ್ನು ಅರ್ಪಿಸಿದರು.ಚರ್ಚ್ ನ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ, . ವಂದನೀಯ ಸಿಪ್ರಿಯಾನ್ ಕಾರ್ಲೊ, ಲೊರೆಟ್ಟ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೇಸನ್ ಮೋನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು. 

ಅಲಂಕರಿತ ವಾಹನದಲ್ಲಿ ಚರ್ಚ್ ನಿಂದ ಆರಂಭಗೊಂಡ  ಪರಮ ಪ್ರಸಾದದ ಭವ್ಯ ಮೆರವಣಿಗೆ ಬ್ಯಾಂಡ್ ವಾದ್ಯ,ಪಾಟಾಕಿಗಳ ಸಡಗರದೊಂದಿಗೆ ಲೋರೆಟ್ಟೊ ಅಂಚೆ ಕಛೇರಿ  ಯಿಂದ ಲೋರೆಟ್ಟೊ ಪದವ್ ಮೂಲಕ ಚರ್ಚ್ ಗೆ ಬಂದು ಕೊನೆಗೊಂಡಿತು. ಧರ್ಮಗುರುಗಳು ಈ ಸಮಾರಂಭಕ್ಕ ಸಹಕರಿಸದವದನ್ನು ಸ್ಮರಿಸಿದರು..  ಬಲಿಪುಜೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಪಪ್ಸ್ ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ಚರ್ಚ್ ಪಾಲನಾ ಮಂಡಳಿ  ಭಕ್ತಿ, ಶಿಸ್ತು ಬದ್ಧವಾಗಿ  ಆಯೋಜಿಸಿತ್ತು.