ಎಲ್‌ಜೆಪಿ-ಲೋಕ ಜನಶಕ್ತಿ ಪಕ್ಷದ ಸಂಸದ ಪ್ರಿನ್ಸ್ ಪಾಸ್ವಾನ್ ವಿರುದ್ಧ ದೆಹಲಿಯ ಕನಾಟ್ ಪ್ಲೇಸ್ ಪೋಲೀಸು ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಕೋರ್ಟ್ ಆದೇಶ ಇರುವುದರಿಂದ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಬಿಹಾರದ ಸಮಷ್ಟಿಪುರ ಕ್ಷೇತ್ರದ ಸಂಸದರಾದ ಪ್ರಿನ್ಸ್ ಪಾಸ್ವಾನ್ ಮಾಜೀ ಕೇಂದ್ರ ಮಂತ್ರಿ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಸಂಬಂಧಿಕರು.