ಮುಂಬಯಿ: ಆಧುನಿಕತೆಯ ಬದಲಾವಣೆಯೊಂದಿಗೆ ಬಲಿಷ್ಠ  ಹೆಜ್ಜೆಗಳಲ್ಲಿ ಭಾರತ್ ಬ್ಯಾಂಕ್  ಮುನ್ನಡೆಯುತ್ತಿದೆ. ಗ್ರಾಹಕರ ವಿಶ್ವಾಸಕ್ಕೆ ಸಮರ್ಥ ಪಥಸಂಸ್ಥೆಯಾಗಿ ಕಾರ್ಯಚರಿಸುತ್ತಿದೆ. ಬ್ಯಾಂಕ್ ಪಾರದರ್ಶಕತ್ವದ ಸೇವೆಯೊಂದಿಗೆ ಕಾರ್ಯನಿರತ ಈ ಬ್ಯಾಂಕ್ ಗ್ರಾಹಕರು ಮತ್ತು ಬ್ಯಾಂಕ್ ಮಂಡಳಿ, ನೌಕರವೃಂದದ ಬಂಧುತ್ವ ಇನ್ನಷ್ಟು ಪ್ರಬಲಗೊಂಡಿದೆ. ಈ ಮೂಲಕ ಬ್ಯಾಂಕ್ ಸಾಧನೆಯತ್ತ ಕ್ರಮಿಸುತ್ತಿದೆ ಎಂದು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ನುಡಿದರು.

ಕಳೆದ ಗುರುವಾರ ಪೂರ್ವಾಹ್ನ ಗೋರೆಗಾಂವ್ ಪೂರ್ವದ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಜರುಗಿಸಲ್ಪಟ್ಟ ಭಾರತ್ ಬ್ಯಾಂಕ್‍ನ 48ನೇ ಮಹಾಸಭೆಗೆ ನಿರ್ದೇಶಕರನ್ನೊಳಗೊಂಡು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನಿತ್ತು ಸಭೆಯ  ಅಧ್ಯಕ್ಷತೆ ವಹಿಸಿ ಸುವರ್ಣ ಮಾತನಾಡಿ ಬ್ಯಾಂಕ್‍ನ ಆಥಿರ್sಕ ಸ್ಥಿರತೆ ಮತ್ತು ಸಾಮರ್ಥ್ಯಗಳನ್ನು ಇನ್ನಷ್ಟು ಸುಧಾರಿಸಿದ್ದು, ಬ್ಯಾಂಕ್ ಸಾಧನೆಯ ಹಾದಿಯಲ್ಲಿದೆ. ಠೇವಣಿದಾರರ ಹಿತಾಸಕ್ತಿ ಹಣಕಾಸು ವ್ಯವಸ್ಥೆ ಮತ್ತು ದಕ್ಷತೆ ಸೂಚಿಸುವ ಮಾನದಂಡವಾದ ಸಿಆರ್‍ಎಆರ್ ಸಾಲ ಮತ್ತು ಬಂಡವಾಳ ಅನುಪಾತವು 13.70% ಅಷ್ಟಿದ್ದು ಬ್ಯಾಂಕು ಸುಸ್ಥಿತಿಯಲ್ಲಿ ಸಾಗುತ್ತಿದೆ. ಅತ್ಯಾಧುನಿಕ ಉತ್ಕೃಷ್ಟ ಸುರಕ್ಷಿತ ಮತ್ತು ಪರಿಣಾಮಕಾರಿ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಸನ್ನಿವೇಶಕ್ಕೆ ತ್ವರಿತವಾಗಿ ಹೊಂದಿಕೊಳ್ಳಲು ಬ್ಯಾಂಕ್ ಬದ್ದವಾಗಿದೆ. ಮುಂಬರುವ ಹಣಕಾಸು ವರ್ಷಕ್ಕೆ ಬ್ಯಾಂಕು ಸಣ್ಣ ಮೊತ್ತದ ಚಿಲ್ಲರೆ ಮುಂಗಡ ವ್ಯವಹಾರಕ್ಕೆ ಆದ್ಯತೆಯನ್ನು ನೀಡಲಿದ್ದು ಮರುಪಾವತಿ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದೂ ಸೂರ್ಯಕಾಂತ್ ತಿಳಿಸಿದರು.

ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ಸೋಮನಾಥ್ ಬಿ.ಅಮೀನ್, ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಚಂದ್ರಶೇಖರ್ ಎಸ್.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಮೋಹನದಾಸ್ ಜಿ.ಪೂಜಾರಿ, ನರೇಶ್ ಕೆ.ಪೂಜಾರಿ, ನಿರಂಜನ್ ಲಕ್ಷ ್ಮಣ ಪೂಜಾರಿ, ಸಂತೋಷ್ ಕೆ.ಪೂಜಾರಿ, ದಯಾನಂದ್ ಆರ್.ಪೂಜಾರಿ, ಗಣೇಶ್ ಡಿ.ಪೂಜಾರಿ, ಹರೀಶ್ ವಿ.ಪೂಜಾರಿ, ನಾರಾಯಣ್ ಎಲ್.ಸುವರ್ಣ, ಸುರೇಶ್ ಬಿ.ಸುವರ್ಣ, ಆಶಾ ಆರ್.ಬಂಗೇರ, ಜಯಲಕ್ಷಿ ್ಮ ಪಿ.ಸಾಲ್ಯಾನ್, ಅಲ್ಬಗನ್ ಸಿ.ಹರಿಜನ್, ಗೌರೀಶ್ ಆರ್. ಕೋಟ್ಯಾನ್, ಜಯಶ್ರೀ ಎಂ. ಹೆಜ್ಜಾಡಿ ವೇದಿಕೆಯಲ್ಲಿ ಆಸೀನರಾಗಿದ್ದ್ದರು. 

ಬ್ಯಾಂಕ್‍ನ ಷೇರುದಾರ ಸದಸ್ಯರ ಪರವಾಗಿ ನ್ಯಾ| ಶಶಿಧರ್ ಯು.ಕಾಪು, ಶೇವಂತಿಲಾಲ್ ಚಿಮನ್ ಲಾಲ್ ಶ್ಹಾ, ಧರ್ಮೇಶ್ ಎಸ್.ಸಾಲ್ಯಾನ್, ಡಾ| ಪ್ರಕಾಶ್ ಮೂಡುಬಿದ್ರಿ, ಒ.ಪಿ.ಪೂಜಾರಿ, ಸೌಕತ್ ವಾಲ್, ಹರಿರಾಂ ಚೌಧರಿ, ಪದ್ಮನಾಭ ಎ.ಪೂಜಾರಿ, ಸನತ್ ಎನ್.ಆರ್, ಕೃಷ್ಣಮೂರ್ತಿ ಶೇಷನ್, ದಿವಾಕರ್ ಸಾಲಿಯನ್, ಜಯರಾಮ್ ಸುಬ್ರಹ್ಮಣ್ಯ, ಓಂಪ್ರಕಾಶ್, ಡಾ| ಸತೀಶ್ ಎನ್.ಬಂಗೇರ, ನಿಲೇಶ್ ಸಾರಂಗ್ ಮಾತನಾಡಿ ತಮ್ಮ ಸಲಹೆ ಸೂಚನೆಗಳನ್ನೀಡಿ ಬ್ಯಾಂಕ್‍ನ ಉನ್ನತಿಗಾಗಿ ಹಾರೈಸಿದರು.

ಸಭೆಯಲ್ಲಿ ಭಾರತ್ ಬ್ಯಾಂಕ್‍ನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಪ್ರಜ್ವಲ್ ಜೆ. ಪೂಜಾರಿ, ಸದಸ್ಯರಾದ ಅಶೋಕ್ ಕೆ.ಕೋಟ್ಯಾನ್, ನಿತ್ಯಾನಂದ ಡಿ.ಕೋಟ್ಯಾನ್, ಮಹಾ ಪ್ರಬಂಧಕರುಗಳಾದ ವಿಶ್ವನಾಥ್ ಜಿ. ಸುವರ್ಣ, ಮಹೇಶ್ ಬಿ. ಕೋಟ್ಯಾನ್, ಸತೀಶ್ ಎಂ.ಬಂಗೇರ ಮತ್ತಿತರ ಉನ್ನತಾಧಿಕಾರಿಗಳು ಹಾಗೂ ಷೇರುದಾರ ಸದಸ್ಯರನೇಕರು ಹಾಜರಿದ್ದರು.

ಬ್ಯಾಂಕ್‍ನ ಸಹಾಯಕ ಪ್ರಬಂಧಕ ಯಶೋಧರ ಡಿ.ಪೂಜಾರಿ ಪ್ರಾರ್ಥನೆಗೈದರು. ಗತ ವರ್ಷದಲ್ಲಿ ಅಗಲಿದ ಸದಸ್ಯರು, ಹಿತೈಷಿಗಳಿಗೆ ಮೌನ ಪ್ರಾರ್ಥನೆ ಮೂಲಕ ಸಭೆಯಲ್ಲಿ ಸದ್ಗತಿ, ಚಿರಶಾಂತಿ ಕೋರಲಾಯಿತು. ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿದ್ಯಾನಂದ್ ಎಸ್.ಕರ್ಕೇರ ಸುಖಾಗಮನ ಬಯಸಿ ಸಭಾ ಕಾರ್ಯಕಲಾಪ ನಿರ್ವಹಿಸಿದರು. ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲಿಯಾನ್ ವಂದಿಸಿದರು.