ಮುಂಬಯಿ, ಆ.19: ಗಾಯತ್ರಿ ಶಕ್ತಿಪೀಠ ಬರೋಡ ಇದರ ಅನುಯಾಯಿ, ತುಳು ಸಂಘ ಬರೋಡಾ, ಗುಜರಾತ್ ಬಿಲ್ಲವ ಸಂಘ ಇವುಗಳ ಸಕ್ರೀಯ ಸದಸ್ಯೆ, ಪ್ರಸಿದ್ಧ ಸಮಾಜ ಸೇವಕಿ, ಧಾರ್ಮಿಕ ಧುರೀಣೆ, ಶೋಭಾ ದಯಾನಂದ ಬೋಂಟ್ರಾ (77) ಅಲ್ಪಕಾಲದ ಅಸೌಖ್ಯದಿಂದ ಇಂದಿಲ್ಲಿ ಸೋಮವಾರ ಬೆಳಿಗ್ಗೆ ಬರೋಡಾ ವಸ್ನಾ ರೋಡ್‍ನ ವಿಶ್ರಾಮ್ ನಗರ್‍ನ ಸ್ವನಿವಾಸದಲ್ಲಿ ನಿಧನರಾದರು.
ಶೋಭಾ ದಯಾನಂದ ಅವರು ಚಿರಾಗ್ ಎಂಟರ್‍ಪ್ರೈಸಸ್ ಸಂಸ್ಥೆಯ ನಿರ್ದೇಶಕಿ, ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹ, ಬೈದಶ್ರೀ ಸಾಂಸ್ಕೃತಿಕ ಕೇಂದ್ರದ ಮಹಾದಾನಿ ಆಗಿದ್ದು ಇತ್ತೀಚೆಗಷ್ಟೇ ಸುಮಾರು ಒಂದುವರೆ ಕೋಟಿ ಮೌಲ್ಯದ ತನ್ನ ನಿವೇಶನ ಜಾಗವನ್ನು ಗುಜರಾತ್ ಬಿಲ್ಲವ ಸಂಘಕ್ಕೆ ದೇಣಿಗೆಯಾಗಿ ನೀಡಿದ್ದು ಓರ್ವ ಕೊಡುಗೈದಾನಿಯಾಗಿ ಗುರುತಿಸಿ ಕೊಂಡಿದ್ದರು.
ವಿಶ್ವ ಪ್ರಸಿದ್ಧ ಗಾಯತ್ರಿ ಶಕ್ತಿಪೀಠ ದೇಗುಲ ಬರೋಡ ಇದರ ಅಧ್ಯಕ್ಷ, ತುಳು ಸಂಘ ಬರೋಡಾ, ಗುಜರಾತ್ ಬಿಲ್ಲವ ಸಂಘ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಬೆಳ್ಮಾಣ್ (ಪತಿ), ಓರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶೋಭಾ ದಯಾನಂದ್ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಅಧ್ಯಕ್ಷ ಗಂಗಾಧರ ಕೆ.ಅಮೀನ್, ಗುಜರಾತ್ ಬಿಲ್ಲವ ಸಂಘ ಇದರ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಖಜಾಂಚಿ ಸುದೇಶ್ ವೈ.ಕೋಟಿಯಾನ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಸ್ಥಾಪಕ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಮತ್ತು ಸರ್ವ ಸದಸ್ಯರು,
ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮೂಡುಬಿದಿರೆ ಶಾಸಕ ಉಮಾನಾಥ ಎ.ಕೋಟ್ಯಾನ್, ಕಾರ್ಕಳ ಶಾಸಕ ವಿ.ಸುನೀಲ್‍ಕುಮಾರ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ಮಾಜಿ ಅಧ್ಯಕ್ಷರುಗಳಾದ ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯ ಜಯ ಸುವರ್ಣ, ಕೆ.ಭೋಜರಾಜ್ (ಕುಳಾಯಿ), ಎನ್‍ಸಿಪಿ ನಾಯಕ ಲಕ್ಷ್ಮಣ್ ಸಿ.ಪೂಜಾರಿ ಚಿತ್ರಾಪು, ಮದನ್ ಕುಮಾರ್ ಮೂಡಿಗೆರೆ ಸೇರಿದಂತೆ ಹತ್ತು ಹಲವಾರು ಸಂಘಸಂಸ್ಥೆಗಳ ಮುಖ್ಯಸ್ಥರುಗಳು ತೀವ್ರ ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.