ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ:  ಸಂಘದಲ್ಲಿ ಸಮಿತಿ ಸದಸ್ಯರ ಭಾಗವಹಿಸುವಿಕೆ ಅತ್ಯವಶ್ಯಕ ಆಗಿದೆ. ಸುಮಾರು ಎಂಟು ದಶಕಗಳಿಂದ ಎಲ್ಲರೂ ತಮ್ಮ ಸಹಕಾರದಿಂದ ಸಂಘವನ್ನು ಬಲಪಡಿ ಮುನ್ನಡೆಸಿದ್ದಾರೆ. ಸದಸ್ಯರು ಒಗ್ಗೂಡಿ ಕೆಲಸ ಮಾಡುತ್ತಾ ಹೊಸಬರನ್ನು ಸಂಘಕ್ಕೆ ಸೇರ್ಪಡೆ ಮಾಡುವ ಪ್ರಯತ್ನ ಮಾಡಬೇಕಾಗಿದೆ.  ಕಳೆದ ಮೂರು ವರ್ಷಗಳ ನನ್ನ ಸಾರಥ್ಯದ ಅವಧಿಗೆ ತಮ್ಮೆಲ್ಲರ ಸಹಕಾರ ಮತ್ತು ಸಹಾಯಗಳಿಗೆ ಋಣಿಯಾಗಿದ್ದು, ಮತ್ತೆ ನನ್ನ ಮೇಲಿನ ವಿಶ್ವಾಸದೊಂದಿಗೆ ಮುಂದಿನ ಮೂರು ವರ್ಷಗಳ ಅಧ್ಯಕ್ಷೆ ಸ್ಥಾನ ಒದಗಿಸಿದ್ದು ಪುನರಪಿ ಎಲ್ಲರ ಸಹಕಾರವನ್ನು ಬಯಸುತ್ತೇನೆ. ಎಲ್.ವಿ ಅಮೀನ್, ಬಿ. ಆರ್ ಪೂಂಜ, ನಾರಾಯಣ ಶೆಟ್ಟಿ ಮೊದಲಾದವರು ಈ ಸಂಘವನ್ನು ಎತ್ತರಕ್ಕೆ ಬೆಳೆಸಿದರು. ಮುಂದೆಯೂ ನಾವೆಲ್ಲರೂ ಜೊತೆಗೂಡಿ ಸಂಘವನ್ನು ಬಾಣೆತ್ತರಕ್ಕೆ ಬೆಳೆಸೋಣ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ನುಡಿದರು.

ಕನ್ನಡ ಸಂಘ ಸಾಂತಾಕ್ರೂಜ್ ತನ್ನ 67ನೇ ವಾರ್ಷಿಕ ಮಹಾಸಭೆಯನ್ನು  ಇಂದಿಲ್ಲಿ ಗುರುವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ನಡೆಸಿದ್ದು ಸಭಾಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣಗೈದು ಸುಜತಾ ಶೆಟ್ಟಿ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ಎಲ್.ವಿ ಅವಿೂನ್, ಉಪಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ, ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌ| ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅವಿೂನ್ ವೇದಿಕೆಯಲ್ಲಿ ಆಸೀನರಾಗಿದ್ದರು.

2024ನೇ ಸಾಲಿನ ವಿದ್ಯಾರ್ಥಿವೇತನ, ವಾರ್ಷಿಕ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿಗಳ ಆರ್ಥಿಕ  ಸಹಾಯನಿಧಿ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಅಧ್ಯಕ್ಷೆ ಸುಜಾತಾ ಆರ್.ಶೆಟ್ಟಿ ಉದ್ಘಾಟಿಸಿದ್ದು, ಗೌರವಾಧ್ಯಕ್ಷ ಎಲ್.ವಿ ಅವಿೂನ್, ಉಪಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್.ಶೆಟ್ಟಿ,  ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ, ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಸಲಹಾ ಸಮಿತಿ ಸದಸ್ಯ ಭೋಜ ಎನ್.ಶೆಟ್ಟಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ.ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ.ಶೆಟ್ಟಿ, ಸಿಎ| ಪ್ರಕಾಶ್ ಶೆಟ್ಟಿ, ರತ್ನಾ ಪಿ.ಶೆಟ್ಟಿ, ಪ್ರೇಮನಾಥ ಶೆಟ್ಟಿ, ಚೇತ್ನಾ ಅಮೀನ್, ಅರವಿಂದ್ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು ವಿದ್ಯಾರ್ಥಿಗಳ ವಾರ್ಷಿಕ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿಗಳ ಆರ್ಥಿಕ  ಸಹಾಯನಿಧಿ  ವಿತರಿಸಿ ಮಕ್ಕಳಿಗೆ ಶುಭಾರೈಸಿದರು.

ಗೌರವಾಧ್ಯಕ್ಷ ಎಲ್.ವಿ ಅಮೀನ್ ವಿದ್ಯಾರ್ಥಿಗಳನ್ನು ಉದ್ಡೇಶಿಸಿ, ಯುವಜನತೆ ಸಂಘದಲ್ಲಿ ಸದಸ್ಯರಾಗಲು ಉತ್ತೇಜಿತರಾಗಬೇಕು. ಭಾವೀ ಜನಾಂಗವು ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾಯಕತ್ವದ ಸಾರಥ್ಯ ವಹಿಸಬೇಕು. ಸಂಘಕ್ಕೆ ಹೊಸ ಸದಸ್ಯರ ಸೇರ್ಪಡೆಯಿಂದ ಸಂಘದ ಜೊತೆಗೆ ಸಮಾಜವೂ ಸದೃಢವಾಗುವುದು ಎಂದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಮಾ ಎಂ. ಪೂಜಾರಿ, ಶಾಲಿನಿ ಜಿ.ಶೆಟ್ಟಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ, ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಪ್ರಸನ್ನ ಶೆಟ್ಟಿ, ಸಂಪ ಎಲ್.ಬಿಲ್ಲವ, ಲಿಂಗಪ್ಪ ಬಿ.ಅಮೀನ್, ಸುಜಾತ ಉಚ್ಚಿಲ್ ಸೇರಿದಂತೆ ಸಂಘದ ಸದಸ್ಯರನೇಕರು ಹಾಜರಿದ್ದರು.