ಮುಂಬಯಿ, ಜು. 26: ತುಳುನಾಡ ಐಸಿರಿ  ವಾಪಿ ಇದರ ಸಂಸ್ಕೃತಿ ಮತ್ತು  ಸಾಹಿತ್ಯ  ಸಮಿತಿಯ ನೇತೃತ್ವದಲ್ಲಿ ವಶೀಕ ಮತ್ತು ತುಳುನಾಡ ಸಂಪ್ರದಾಯಿಕ ಕ್ರಿಡೋಸ್‌ಹ ಕಾರ್ಯಕ್ರಮ ಕಳೆದ ರವಿವಾರ (ಜು.21) ತುಳುನಾಡ ಐಸಿರಿ ವಾಪಿ ಅಧ್ಯಕ್ಷ  ಬಾಲಕೃಷ್ಣ  ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಅದ್ದೂರಿಯಿಂದ ಸಂಭ್ರಮಿಸಿತು. 

ಸಂಘದ ಗೌರವ ಅಧ್ಯಕ್ಷ ಸದಾಶಿವ ಜಿ.ಪೂಜಾರಿ, ಮಹಿಳಾ ವಿಭಾಗದ ಸದಸ್ಯರು ಮತ್ತು ಅತಿಥಿ ಗಣ್ಯರನ್ನೊಳಗೊಂಡು ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಕ್ರೀಡಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ  ಚಾಲನೆ ನೀಡಿದರು. ಉದ್ಯಮಿ ಮತ್ತು ಸಮಾಜ ಸೇವಕ ಮಹೇಶ್ ಶೆಟ್ಟಿ ಸಿಲ್ವಾಸ್ ಅತಿಥಿ ಅಭ್ಯಾಗತರಾಗಿದ್ದರು.

ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಭಾಷಣಗೈದು ಐಸಿರಿ ನಡೆದು ಬಂದು ದಾರಿ ಹಾಗೂ ನಮ್ಮ  ಭಾಷೆ  ಸಂಸ್ಕೃತಿ, ಸಂಪ್ರದಾಯಿಕ ಕ್ರೀಡೆ ಕೂಟ, ಹಿರಿಯರಿಗೆ ಗೌರವ, ಯುವಕರಿಗೆ ಪ್ರೋತ್ಸಾಹ ಹಾಗೂ  ಗೌರವ, ಭಾಂದವ್ಯ ಬೆಳೆಸಿದ ಕೀರ್ತಿ ನಮ್ಮ ತುಳುನಾಡ ಐಸಿರಿ ಸಂಸ್ಥೆಗೆ ಹೆಮ್ಮೆ ಎಂದಿದೆ. ಮುಂಬಯಿ  ಉಪನಗರದ ವಾಪಿ ಗುಜರಾತ್ ಪ್ರದೇಶದಲ್ಲಿ ಉದ್ಯೋಗ ನಿಮಿತ್ತ ವಾಸವಾಗಿರುವ  ತುಳು ಕನ್ನಡಿಗ ಬಂದು ಗಳ ಒಗ್ಗಟ್ಟು ಬಯಸಿ ಹುಟ್ಟಿಕೊಂಡ ಈ ಸಂಸ್ಥೆ ಎಂದರು. 

ಐಸಿರಿ ಉಪಾಧ್ಯಕ್ಷರುಗಳಾದ ಗಣೇಶ್ ಎನ್ ಶೆಟ್ಟಿ ಮತ್ತು ನವೀನ್  ಶೆಟ್ಟಿ, ಕಾರ್ಯದರ್ಶಿ ಉದಯ  ಬಿ.ಶೆಟ್ಟಿ, ಜೊತೆ  ಕಾರ್ಯದರ್ಶಿ  ಸುಕೇಶ್ ಶೆಟ್ಟಿ, ಕ್ರೀಡೆ ಮತ್ತು ಸಾಂಸ್ಕೃತಿಕ ಉಪ ಸಮಿತಿ ಸಂಚಾಲಕ ಪುಷ್ಪರಾಜ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಸಂಚಾಲಕಿ ರಜಿನಿ ಬಿ.ಶೆಟ್ಟಿ, ಶೀರ್ಷಿಟಿತ ಉದಯ ಶೆಟ್ಟಿ,  ಹೋಟೆಲ್  ಹನಿ ಗಾರ್ಡನ್‌ನ ಶ್ರೀಧರ್  ಶೆಟ್ಟಿ,  ಕಿರಣ್ ಅಂಚನ್, ಅನಿಲ್ ಶೆಟ್ಟಿ,  ಚೇತನ್ ದೇವಾಡಿಗ, ನಿಖಿತ್ ಶೆಟ್ಟಿ, ಸೂರಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಉದಯ  ಬಿ. ಶೆಟ್ಟಿ ಸ್ವಾಗತಿಸಿ ಧನ್ಯವದಿಸಿದರು.