ಮಡಂತ್ಯಾರು:  ಭಾರತೀಯ ಟಾರ್ಗೆಟ್ ಬಾಲ್ ಅಸೋಸಿಯೇಷನ್ ಇದರ ವತಿಯಿಂದ ರಾಜಸ್ಥಾನದ ಅಲ್ವಾರಿಲ್ಲಿ ನಡೆದ 8ನೇ ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್  ಪಂದ್ಯಾಟದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ  ಕರ್ನಾಟಕ ಟಾರ್ಗೆಟ್ ಬಾಲ್  ತಂಡದ ಹಿರಿಯ ವಿಭಾಗವನ್ನು ಪ್ರತಿನಿಧಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ  ಇದೀಗ ಜುಲೈ 8 ರಿಂದ 11ರ ವರೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇವರು ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಮಿತಾ ಹಾಗೂ ಬಿಸಿ ರೋಡ್ ನ ನ್ಯಾಯವಾದಿ ಚೆನ್ನಪ್ಪ ದಂಪತಿಗಳ ಪುತ್ರರಾಗಿದ್ದಾರೆ.

ಇವರಿಗೆ  ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ  ತರಬೇತಿ ನೀಡಿರುತ್ತಾರೆ.