ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ತಿಂಗಳ ವೇದಿಕೆ ಸರಣಿಯ 20 ನೇ ವರ್ಷಾಚರಣೆ ಮತ್ತು 240 ನೇ ಕಾರ್ಯಕ್ರಮ ಕಲಾಂಗಣದಲ್ಲಿ 05-12-2021 ರಂದು ನಡೆಯಿತು. ತನ್ನ ಕೆಲಸ ಕಾರ್ಯಗಳಿಗೆ ಧನ ಸಂಗ್ರಹಿಸಲು ಆಯೋಜಿಸಿದ `ತೆಂಕೊ ಅಭಿಯಾನ್’ ಎಂಬ ವಿಶಿಷ್ಟ ಅಭಿಯಾನಕ್ಕೆ ಮಂಗಳೂರಿನ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಶ್ರೀ ಆಲ್ವಿನ್ ರೊಡ್ರಿಗಸ್ ಚಾಲನೆ ನೀಡಿದರು. ನಂತರ ಕುರು ಕುರು ಕಾನಾ ಮಕ್ಕಳ ಹಾಡುಗಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲೂವಿಸ್ ಜೆ ಪಿಂಟೊ ಉಪಸ್ಥಿತರಿದ್ದರು. ಸ್ಪರ್ಧಾ ಸಂಚಾಲಕಿ ರೈನಾ ಕ್ಯಾಸ್ತೆಲಿನೊ ವಿಜೇತರ ಹೆಸರು ಓದಿದರು.

ಮೊದಲಿಗೆ ಈ ಕಾರ್ಯಕ್ರಮಕ್ಕೆ ಹಿರಿಯ ಕೊಂಕಣಿ ರಂಗಭೂಮಿ ಕಲಾವಿದ ಶ್ರೀ ಚಾರ್ಲ್ಸ್ ಸಿಕ್ವೇರಾ ಗಂಟೆ ಬಾರಿಸಿ ಚಾಲನೆ ನೀಡಿದರು. ಇತ್ತೀಚೆಗೆ ನಿಧನರಾದ ಮಾಂಡ್ ಸೊಭಾಣ್ -  ಕಾರ್ವಾಲ್ ಮನೆತನದ ನಾಲ್ಕನೇ ಕಲಾಕಾರ್ ಪುರಸ್ಕಾರ ಪಡೆದ ವಂ. ಫಾ. ಚಾರ್ಲ್ಸ್ ವಾಸ್ ಇವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

ಮಾಂಡ್ ಸೊಭಾಣ್ ಪ್ರೇರಕ ಮತ್ತು ಸಹ ಸ್ಥಾಪಕ  ಕೊಂಕಣಿಯ ಮೇರು ಕವಿ ಚಾಫ್ರಾ ಡಿಕೋಸ್ತಾ ಇವರ 29 ಪುಣ್ಯ ಸ್ಮರಣೆ ಸಂದರ್ಭ ಅವರು ಬರೆದ ಮೂರು ನಾಟಕಗಳ ಪ್ರದರ್ಶನ ನಡೆಯಿತು. ಮಾಂಡ್ ತಂಡದಿಂದ ವಿಕಾಸ್ ಕಲಾಕುಲ್ ನಿರ್ದೇಶನದಲ್ಲಿ `ಮ್ಹಜ್ಯಾ ಪುತಾಚೊ ಕಿಣ್ಕುಳೊ’ ಮತ್ತು `ಟೊಮೆಟೊ’ ಎಂಬ ಎರಡು ನಾಟಕಗಳು ಮತ್ತು ಡೆನಿಸ್ ಮೊಂತೇರೊ ನಿರ್ದೇಶನದಲ್ಲಿ ಅಸ್ತಿತ್ವ ತಂಡದಿಂದ `ಹಾಂಡೊ ಉಟ್ಲಾ’ ನಾಟಕ ಪ್ರದರ್ಶಲನಗೊಂಡಿತು.

ಮ್ಹಜ್ಯಾ ಪುತಾಚೊ ಕಿಣ್ಕುಳೊ ನಾಟಕದಲ್ಲಿ ಆಮ್ರಿನ್ ಡಿಸೊಜ, ಸುಜಯಾ ಡಿಸೋಜ, ಜಾಸ್ಮಿನ್ ಡಿಸೋಜ, ಸಂದೀಪ್ ಮಸ್ಕರೇನ್ಹಸ್ ಮತ್ತು ಜೀವನ್ ಸಿದ್ದಿ, ಹಾಗೂ ಟೊಮೆಟೊ ನಾಟಕದಲ್ಲಿ  ಆಲ್ಬನ್ ಡಿಸಿಲ್ವಾ, ವ್ರೀಥನ್ ಪಿಂಟೊ, ರೊಮಾರಿಯೊ ಪಿಂಟೊ, ಇಮಾನಿ ಡಿಸೋಜ, ಪ್ರಿತಿಕಾ ಡಿಸೋಜ ಇವರು ನಟಿಸಿದರು. ರೆನಾಲ್ಡ್ ಲೋಬೊ, ಆಸ್ಟನ್ ಡಿಸೋಜ, ರೊನಿ ಕ್ರಾಸ್ತಾ ಕೆಲರಾಯ್ ಸಹಕರಿಸಿದರು.

ಹಾಂಡೊ ಉಟ್ಲಾ ನಾಟಕದಲ್ಲಿ ಡೆನಿಸ್ ಮೊಂತೇರೊ, ಡೊನ್ನಾ ಡಿಸೋಜ, ಸಂದೀಪ್ ಟೆಲ್ಲಿಸ್, ಜಾಕ್ಸನ್ ಡಿಕುನ್ಹಾ, ಆನ್ಸ್ಟಿನ್ ಮಚಾದೊ ನಟಿಸಿದರೆ, ಕ್ರಿಸ್ಟೋಫರ್ ಡಿಸೋಜ, ಸತೀಶ್ ಪಿಬಿ., ಕ್ಲಾನ್ ವಿನ್ ಫೆರ್ನಾಂಡಿಸ್, ಝೀನಾ ಬ್ರಾಗ್ಸ್, ಸ್ಯಾಮ್ವೆಲ್ ಮತಾಯಸ್ ಇವರು ಹಿನ್ನೆಲೆಯಲ್ಲಿ ಸಹಕರಿಸಿದರು. ಧ್ವೀನಿ ವ್ಯವಸ್ಥೆಯನ್ನು ಸುರಭಿ ಸೌಂಡ್ಸ್ ಮತ್ತು ಬೆಳಕಿನ ನಿರ್ವಹಣೆಯನ್ನು ಏಂಜಲ್ಸ್ ಪಡೀಲ್ ಇವರು ನಿರ್ವಹಿಸಿದರು.

2002 ಜನವರಿ 06 ರಂದು ಆರಂಭವಾದ ಈ ಸರಣಿಯು ಎಲ್ಲಾ ಆಡೆತಡೆಗಳನ್ನು ಮೀರಿ ಯಶಸ್ವಿ 20 ವರ್ಷಗಳನ್ನು ಪೂರೈಸಿದೆ. ಕೊಂಕಣಿಯ ಗಾಯನ, ಹಾಡು, ನೃತ್ಯ, ನಾಟಕ, ಯಕ್ಷಗಾನ, ಮಾಂಡೊ, ಕೋಲಾಟ, ಗುಮಟೆ ಹಾಡು ಇತ್ಯಾದಿ ಜನಪದದ ವಿವಿಧ ಪ್ರಕಾರಗಳಿಗೆ ವೇದಿಕೆ ಕಲ್ಪಿಸಿದೆ. ದೇಶ ವಿದೇಶದ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. 

(ಚಿತ್ರ ಕೃಪೆ : ಸ್ಟ್ಯಾನ್ಲಿ ಬಂಟ್ವಾಳ್)