ಮ್ಯಾಡ್ರಿಡ್‌ನಲ್ಲಿ ನಡೆದ ಟೆನ್ನಿಸ್ ಡೇವಿಸ್ ಕಪ್ ಫೈನಲ್‌ನಲ್ಲಿ ರಶಿಯಾ ತಂಡವು ಕ್ರೊಯೇಶಿಯಾ ತಂಡವನ್ನು ಸೋಲಿಸಿ 15 ವರುಷಗಳ ಬಳಿಕ ಡೇವಿಸ್ ಕಪ್ ಗೆದ್ದಿತು.

ರಶಿಯಾ ಡೇವಿಸ್ ಕಪ್‌ನಲ್ಲಿ 2002 ಮತ್ತು 2006ರಲ್ಲಿ ಗೆದ್ದಿತ್ತು. ಇದು ಅವರಿಗೆ ಮೂರನೆಯ ಬಾರಿಯ ಪ್ರಶಸ್ತಿ. ಕ್ರೊಯೇಶಿಯಾ ಗೆದ್ದಿದ್ದರೂ ಮೂರನೆಯ ಬಾರಿ ಪ್ರಶಸ್ತಿ ಗೆದ್ದಂತಾಗುತ್ತಿತ್ತು. ಕ್ರೊಯೇಶಿಯಾ 2018ರ ಚಾಂಪಿಯನ್ ಆಗಿದ್ದು ಈ ಸಲದ ಫೇವರೆಟ್ ಆಗಿತ್ತು. ಆದರೆ ರಶಿಯಾದ ಡೇನಿಯಲ್ ಮೆದ್ವೆದೆವ್ ಅದನ್ನು ಸುಳ್ಳು ಮಾಡಿದರು.