ಜೈನ ಕಾಶಿ ಮೂಡು ಬಿದಿರೆ ಮಹಾದೇವ ಶೆಟ್ಟಿ ಬಸದಿ ಶ್ರೀ ಜೈನ ಮಠ ಟ್ರಸ್ಟ್  (ರಿ )ಹಾಗೂಶ್ರೀ ಕ್ಷೇತ್ರ ಧರ್ಮ ಸ್ಥಳ ಧರ್ಮೋ ತ್ತಾನ ಟ್ರಸ್ಟ್ ಸಹಯೋಗದಲ್ಲಿ ಜೀರ್ಣೋದ್ದಾರ ಗೊಂಡು ಇದೀಗ ಬಿಂಬ ಶುದ್ದಿ ಧಾಮ ಸಂಪ್ರೂಕ್ಷಣ ಕಾರ್ಯಕ್ರಮ ವು ದಿನಾಂಕ 10.12.2021ರಿಂದ 12.12.2021ರ ವರೆಗೆ ವಿವಿಧ ಜೈನ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಜರುಗಲಿದೆ.

ಈ ಸಂಧರ್ಭದಲ್ಲಿ 108 ದಿವ್ಯ ಸಾಗರ ಮುನಿ ರಾಜ ರ ಉಪಸ್ಥಿತಿ ಆಶೀರ್ವಾದ ಗಳೊಂದಿಗೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಮಾರ್ಗದರ್ಶನ ನೇತೃತ್ವ ದಲ್ಲಿ ಜೈನ ಆಗಮೋಕ್ತ ರೀತಿಯಲ್ಲಿ ಜರುಗಲಿದೆ.

ಜೀರ್ಣೋದ್ದಾರ ಕಾರ್ಯ 2014 ರಲ್ಲಿ ಚಾಲನೆ ದೊರಕಿದ್ದು 7 ವರ್ಷ ಗಳಲ್ಲಿ ಬಸದಿ ಮೂಲ ಸ್ವರೂಪ ಉಳಿಸಿ ಜೀರ್ಣೋದ್ದಾರ ವನ್ನು ಹಂತ ಹಂತ ವಾಗಿ ಕಾಮಗಾರಿ ನಡೆಸಿ ಸುಂದರ ವಾಗಿ ನಿರ್ಮಿಸಲಾಗಿದೆ ಈ ಸಂಧರ್ಭ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಧರ್ಮಾಧಿ ಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆ ಯವರು ನಮ್ಮ ರಾಜ್ಯ ದ ಪ್ರಾಚೀನ ಹಿಂದೂ ದೇಗುಲ ಹಾಗೂ ಜೈನ ಬಸದಿಗಳ  ಜೀರ್ಣೋದ್ದಾರ ಕ್ಕೆ ಸಹಕರಿಸುತ್ತಿ ರುದು ಸ್ವತಃ ತಾವು ಖುದ್ದಾಗಿ ಜೀರ್ಣೋದ್ದಾರ ದ ಪ್ರಗತಿ ಕಾರ್ಯ ಪರಿಶೀಲನೆ ಮಾಡಿ ನಮಗೆಲ್ಲ ಸಹಕರಿಸುತ್ತಿರುದು ಸಂತೋಷ ಬಸದಿ ಮುಖ ಮಂಟಪ ಸುತ್ತಾಲಯ ದ ಜೀರ್ಣೋದ್ದಾರ ದಾನಿ ಗಳ ಸಹಕಾರ ದಿಂದ ಶ್ರೀ ಜೈನ ಮಠ ಟ್ರಸ್ಟ್ ವತಿಯಿಂದ ಕಾಮಗಾರಿ ಪೂರ್ಣ ಗೊಳಿಸಿದ್ದು ಬಿಂಬ ಶುದ್ದಿ ಬಿಂಬ ಪ್ರತಿಷ್ಠೆ ಮೂರು ದಿನಗಳ ಸರಳ ಧಾರ್ಮಿಕ ಕಾರ್ಯಕ್ರಮ ಕೊವಿಡ್ ಓಮಿಕ್ರಾನ್ ನಿಯಮ ಪಾಲಿಸಿ ಆಚರಿಸಲಾಗುದು.

ಈ ಬಸದಿ ಯನ್ನು ಸುಮಾರು 10 ನೆ ಶತಮಾನದಲ್ಲಿ ಇಲ್ಲಿಯ ಶ್ರೀ ಮಠ ದ ಶಿಷ್ಯ ವರ್ಗ ದ ವರಾದ ಮಹಾ ದೇವ ಶ್ರೇಷ್ಠಿ ಅನ್ನುವ ರತ್ನ ವ್ಯಾಪಾರಿ ಕಟ್ಟಿಶ್ರೀ ಮಠ ಕ್ಕೆ ಒಪ್ಪಿಸಿದ್ದು ಅಂದಿನ ಸ್ವಾಮೀಜಿ ಭಗವಾನ್ ಅದಿನಾಥ ಸ್ವಾಮಿ ಬಿಂಬ ಪ್ರತಿಷ್ಠೆ ನೆರವೇರಿಸಿದ್ದರು ಕಳೆದ 2ತಿಂಗಳಲ್ಲಿ ಕ್ರಮ ವಾಗಿ ಬೆಟ್ಕೇರಿ ಬಸದಿ, ಬಡಗ ಬಸದಿ ಪಡು ಬಸದಿ ಜೀರ್ಣೋದ್ದಾರ ಬಿಂಬ ಶುದ್ದಿ ಗೊಂಡಿದ್ದು ಇದು ನಾಲ್ಕನೇ ಬಸದಿ ಯಾಗಿದೆ ಒಂದೇ ವರ್ಷ ದ ಎರಡು ತಿಂಗಳಲ್ಲಿ ನಾಲ್ಕು ಬಸದಿ ಜೀರ್ಣೋದ್ದಾರ  ಗೊಂಡ ಇತಿಹಾಸ ಬಹು ಅಪರೂಪ ವಾಗಿದ್ದು ಇದೆಲ್ಲಪೂರ್ವ ಆಚಾರ್ಯ ದೀಕ್ಷಾ ಗುರು ಗಳ ಅನುಗ್ರಹ ಆಶೀರ್ವಾದ ದ ಫಲ ಊರ ಪರ ಊರ ಕ್ಷೇತ್ರದ ಭಕ್ತರ ಸಹಕಾರ ದಿಂದ ಸಾಧ್ಯ ವಾಗಿದೆ ಇನ್ನಷ್ಟು ಬಸದಿ ಸುಧಾರಣೆ ಕೆಲಸ ಆಗಬೇಕಾಗಿದೆ ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ತಿಳಿಸಿದರು ಜೈನ ಕಾಶಿ ಯ 18 ಬಸದಿ ಗಳಲ್ಲಿ ಒಂದಾದ ಮಹಾ ದೇವ ಶೆಟ್ಟಿ ಬಸದಿ ಜೀರ್ಣೋದ್ದಾರ ಪೂಜೆ ಇತ್ಯಾದಿ ಗಳಿಗೆ ಸುಮಾರು 30ಲಕ್ಷ ವೆಚ್ಚ ದಾನಿಗಳ ವತಿಯಿಂದ ಬರಿಸಲಾಗಿದೆ ಎಂದು ಶ್ರೀ ಸ್ವಾಮೀಜಿ ತಿಳಿಸಿರುತ್ತಾರೆ.

ಪ್ಲವ ನಾಮ ಸಂವತ್ಸ ರ ಇದೆ ಬರುವ 10.12.21ರಂದು ಧರ್ಮಾಧಿಕಾರಿ ಪದ್ಮವಿಭೂಷಣ ಶ್ರೀ ಡಿ ವೀರೇಂದ್ರ ಹೆಗ್ಗಡೆ ಯವರ ವತಿಯಿಂದ ಇಂದ್ರ ಪ್ರತಿಷ್ಠೆ, ನಾಂದಿ ಮಂಗಲ, ಕ್ಷೇತ್ರ ಪಾಲ ಪ್ರತಿಷ್ಠೆ 24ಕಲಶ ಅಭಿಷೇಕ ಪೂಜಾ ಸೇವಾ ದಾತಾರ ರಿಂದ ಮೂರು ದಿನ ಸಂಘ ಸಂತರ್ಪಣೆ 11.12.21ವಾಸ್ತು ಪೂಜೆ, ನವಗ್ರಹ ಶಾಂತಿ,ಪಟ್ಣ ಶೆಟ್ಟಿ ಸುದೇಶ್,ದಿನೇಶ್ ಬೆಟ್ಕೇರಿ, ಮನೆತನ ಆದರ್ಶ್ ಕೊಂಡೆ ಮನೆತನ, ಬಸದಿ ಮುಕ್ತೇಸರರು ಬ್ರಹ್ಮ ದೇವ ರ ಪೂಜೆ ಯುವರಾಜ್ ಜೈನ ಎಕ್ಷಲೆಂಟ್, ಕಾಲೇಜು ಮಧ್ಯಾಹ್ನ 2.30ರಿಂದ ಮಹಾವೀರ ಭವನ ದಲ್ಲಿ ಪ. ಪೂ 108 ದಿವ್ಯ ಸಾಗರ ಮುನಿ ರಾಜ ರ ಪಿಂಚಿ ಪರಿವರ್ತನೆ ಭಟ್ಟಾರಕ ಶ್ರೀ ಗಳ ಉಪಸ್ಥಿತಿ ಯಲ್ಲಿ ಧರ್ಮಾಧಿ ಕಾರಿ ಡಿ ವೀರೇಂದ್ರ ಹೆಗ್ಗಡೆ ಯವರ ಸ್ಥಾನೀಯ ಗಣ್ಯ ರ ಉಪಸ್ಥಿತಿ ಯಲ್ಲಿ ಧಾರ್ಮಿಕ ಸಭೆ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಜರುಗಲಿದೆ ಸಂಜೆ ಯಕ್ಷಿ ಮಹಾ ದೇವಿ ಪದ್ಮಾವತಿ ಪ್ರತಿಷ್ಠೆ ಯು,ಯಂ. ಏನ್ ವಿಜಯೇಂದ್ರ, ಚಕ್ಕೊಡು, ಸಾಗರ ತಾಲೋಕು  ಬಿ ಸರಸ್ವತಿ ಇಂದ್ರ ಮತ್ತು ಮಕ್ಕಳು ನಾಗ ಪ್ರತಿಷ್ಠೆ,ಹಾಗೂ 54 ಕಲಶ ಅಭಿಷೇಕ ಲಕ್ಷ ಹೂವಿನ ಪೂಜೆ ಶ್ರೀ ಕೆ ಅಭಯ ಚಂದ್ರ ಜೈನ್,ವತಿಯಿಂದ ಜರುಗಲಿದೆ 12.12.21 ರಂದು ಬೆಳಿಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಶ್ರೀ ಮಠ ದ ಶಿಷ್ಯ ವರ್ಗದ ವತಿಯಿಂದ ವಿಶೇಷ ಮೂಲಿಕೆ ದ್ರವ್ಯ ಗಿಡ ಮೂಲಿಕೆ ಗಳಿಂದ ಅಪೂರ್ವ ಪ್ರಾಚೀನ ಪ್ರತಿಷ್ಠಾ ತಿಲಕ ದಲ್ಲಿ ವಿವರಿಸಿದಂತೆ ಬಿಂಬ ಶುದ್ದಿ ಅಭಿಷೇಕ ರಾಜಾಗೃಹ ಮಂಗಳೂರಿನ ಇಂದಿರಮ್ಮ ಮತ್ತು ಮಕ್ಕಳು ಕುಟುಂಬ ಹಾಗೂ ಕಾಸರಗೋಡು, ಮಂಜೇಶ್ವರ ಕೂಡಾಲ ಮೆರ್ಕಳ ಗುಮ್ಮ ಣ್ಣ ಶೆಟ್ರ ಮನೆತನ ದ ವತಿಯಿಂದ ಅಷ್ಟ ದಿಕ್ಷು ಧಾಮ ಸಂಪ್ರೂಕ್ಷಣೆ, ಬಿಂಬ ಕ್ಕೆ ಗಂದ ಲೇಪನ ಅಕ್ಷರ ನ್ಯಾಸ ಮಂತ್ರ ನ್ಯಾಸ, ನಾಯನೋನ್ಮಿಲನ ಸೂರಿ ಮಂತ್ರಮೂಲಕ ಬಿಂಬ ಪ್ರತಿಷ್ಠೆ ಮುಖ ವಸ್ತ್ರ ಉದ್ಘಾಟನೆ ಶಿಖರ ದಲ್ಲಿ ಮುಗುಳಿ ಸ್ಥಾಪನೆ ಉತ್ಸವ 108ಕಲಶ ಅಭಿಷೇಕ, ತೋರಣ ವಿಸರ್ಜನೆ ಯತಿಗಳ ಪಾದ ಪೂಜೆ ಸಂಜೆ 4.30ಕ್ಕೆ ಸಾವಿರ ಕಂಬ ಬಸದಿ ಯಲ್ಲಿ ಶಂಭವ ಕುಮಾರ್ ವತಿಯಿಂದ ದೀಪೋತ್ಸವ ಶ್ರೀಮತಿ ವೀಣಾ ಶೆಟ್ಟಿ ವಿರಚಿತ ಮಹಾ ಪುರಾಣ ದಿಂದ ಪ್ರೇರಣೆ ಗೊಂಡು ರಚಿಸಿದ ಸಹಸ್ರ ನಾಮ ಸ್ತೋತ್ರಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.