ಲುವಿ ಜೆ. ಪಿಂಟೊ
ಕೊಂಕಣಿಯ ಪ್ರಮುಖ ಸಂಸ್ಕೃತಿಕಾ ಸಂಘಟನೆ ಮಾಂಡ್ ಸೊಭಾಣ್ 2021-22 ನೇ ಸಾಲಿನ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ ಪುನರಾಯ್ಕೆಗೊಂಡರು. 34 ನೇ ಮಹಾಸಭೆಯು ಇತ್ತೀಚೆಗೆ ಕಲಾಂಗಣದಲ್ಲಿ ನಡೆದು ನೂತನ ಸಮಿತಿ ಆಯ್ಕೆಯಾಯಿತು. ಸಮಿತಿ ಸದಸ್ಯರು 17-09-2021 ರಂದು ಕಲಾಂಗಣದಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಎರಿಕ್ ಒಝೇರಿಯೊ
ಎರಿಕ್ ಒಝೇರಿಯೊ (ಗುರಿಕಾರ), ಸ್ಟ್ಯಾನಿ ಆಲ್ವಾರಿಸ್ (ಸಂಘಟಕ), ಸುನೀಲ್ ಮೊಂತೇರೊ (ಉಪಾಧ್ಯಕ್ಷ), ಕಿಶೋರ್ ಫೆರ್ನಾಂಡಿಸ್ (ಕಾರ್ಯದರ್ಶಿ), ನವೀನ್ ಲೋಬೊ (ಸಹ ಕಾರ್ಯದರ್ಶಿ), ಎಲ್ರೊನ್ ರೊಡ್ರಿಗಸ್ (ಖಜಾಂಚಿ), ವಿಕ್ಟರ್ ಮತಾಯಸ್ (ಸಾರ್ವಜನಿಕ ಸಂಪರ್ಕಾಧಿಕಾರಿ) ಯಾಗಿ ಆಯ್ಕೆಗೊಂಡರು.
ಅರುಣ್ ರಾಜ್ ರೊಡ್ರಿಗಸ್ (ಕಲಾಕುಲ್ ಆಡಳಿತಾಧಿಕಾರಿ), ಐರಿನ್ ರೆಬೆಲ್ಲೊ (ಸುಮೇಳ್ ಸಮನ್ವಯಿ), ರಾಹುಲ್ ಪಿಂಟೊ (ನಾಚ್ ಸೊಭಾಣ್), ಬನ್ನು ಫೆರ್ನಾಂಡಿಸ್ (ಕಲಾಂಗಣ ನಿರ್ವಹಣೆ), ರೊನಿ ಕ್ರಾಸ್ತಾ (ಲೈಬ್ರೆರಿ), ಲಾರೆನ್ಸ್ ಡಿಸೋಜ (ಯೋಜನಾ ನಿರ್ವಹಣೆ) ಯ ಜವಾಬ್ದಾರಿ ನೀಡಲಾಯಿತು. ಲವೀನಾ ದಾಂತಿ, ಜಾಸ್ಮಿನ್ ಲೋಬೊ, ಜೊಯೆಲ್ ಪಿರೇರಾ, ರೈನಾ ಕ್ಯಾಸ್ತೆಲಿನೊ, ಲಿಂಗಪ್ಪ ಗೌಡ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುವರು.
ಮಾಂಡ್ ಸೊಭಾಣ್ ಕೆಲಸ ಕಾರ್ಯಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕರಿಸಲು ಈ ಕೆಳಗಿನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಜೇಮ್ಸ್ ಲೋಪಿಸ್ (ಹೊನ್ನಾವರ), ಜಾಕೊಬ್ ಫೆರ್ನಾಂಡಿಸ್ (ಉತ್ತರ ಕನ್ನಡ), ಶೈಲಾ ಫೆರ್ನಾಂಡಿಸ್ (ಉಡುಪಿ), ವಿನೋದ್ ಕ್ರಾಸ್ತಾ (ಕಾಸರಗೋಡು), ಜೊಯ್ ಫೆರ್ನಾಂಡಿಸ್ (ಗೋವಾ) ಪ್ರಾದೇಶಿಕ ಪ್ರತಿನಿಧಿಗಳಾಗಿ ಹಾಗೂ ಅಂತರಾಷ್ಟ್ರೀಯ ಪ್ರತಿನಿಧಿಗಳಾಗಿ ಡಯಾನ್ ಡಿಸೋಜ (ದುಬಾಯ್), ಸುನೀಲ್ ಡಿಸಿಲ್ವ (ಖತಾರ್), ರುಡಾಲ್ಫ್ ಡಿಸೋಜ (ಕುವೇಯ್ಟ್), ಹ್ಯಾರಿಯೆಟ್ ವಿದ್ಯಾಸಾಗರ್ (ಯು.ಎಸ್.ಎ.) ಮತ್ತು ರೊಯ್‍ಸ್ಟನ್ ಫೆರ್ನಾಂಡಿಸ್ (ಫ್ರಾನ್ಸ್).
ರೊಯ್ ಕ್ಯಾಸ್ತೆಲಿನೊ, (ಪಿರ್ಜೆಂತ್) ಮತ್ತು ರೊನಾಲ್ಡ್ ಮೆಂಡೊನ್ಸಾ (ಕಲಾಂಗಣ ಸಮಿತಿ ಅಧ್ಯಕ್ಷರು) ಪದನಿಮಿತ್ತ ಸದಸ್ಯರಾಗಿ ಇರುವರು.