ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಮತಾಂತರ ನಿಷೇಧ ಮಸೂದೆ ತರುವ ಹೇಳಿಕೆ ನೀಡಿದ್ದನ್ನು ಬೆಂಬಲಿಸಿದ ಬಿಜೆಪಿಯ ಗೂಳಿಹಟ್ಟಿ ಶೇಖರ್ ಅವರು ನನ್ನ ತಾಯಿಯನ್ನೇ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ ಎಂದರು.
ನನ್ನ ಚಿತ್ರದುರ್ಗ ಜಿಲ್ಲೆಯಲ್ಲಿ 20,000 ಜನರ ಮತಾಂತರ ಆಗಿದೆ. ಮಾತನಾಡಿದರೆ ಕ್ರಿಶ್ಚಿಯನರು ಅತ್ಯಾಚಾರದ ಆರೋಪ ಹೊರಿಸುತ್ತಾರೆ. ಚರ್ಚ್‌ಗಳು ಸುಲಭವಾಗಿ ಬಡವರನ್ನು ಆಮಿಷ ತೋರಿಸಿ ಮತಾಂತರಿಸಿಕೊಳ್ಳುತ್ತಾರೆ ಎಂದು ಗೂಳಿಹಟ್ಟಿ ಗುಟುರು ಹಾಕಿದರು.