Representational Image

ಡಿಆರ್‌ಐ ಗುಪ್ತಚರ ಇಲಾಖೆಯವರು ಗುಜರಾತಿನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಇಡೀ ದೇಶದಲ್ಲಿಯೇ ಅತಿ ದೊಡ್ಡ ಮಾದಕ ದ್ರವ್ಯ ಕಳ್ಳ ಮಾಲನ್ನು ಮಂಗಳವಾರ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

15,000 ಕೋಟಿ ರೂಪಾಯಿ ಮೌಲ್ಯದ 3,000 ಕಿಲೋ ಹೆರಾಯಿನ್ ಮಾದಕ ವಸ್ತು ವಶಪಡಿಸಿಕೊಂಡರು. ಜೊತೆಗೆ ಆಂಧ್ರ ಪ್ರದೇಶ ದಂಪತಿ ಹಾಗೂ ಇಬ್ಬರು ಅಫಘಾನಿಸ್ತಾನದವರು ಎಂದು ನಾಲ್ಕು ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಡಿಆರ್‌ಐ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ಧಿಮತ್ತೆಯ ಸಾಧನ ಈ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಗೊತ್ತಾಗಿದೆ.