ಮಂಗಳೂರು: ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಂಗಳೂರು ಇದರ ವತಿಯಿಂದ 15ನೇ ವರ್ಷದ ಮುಂಡಾಲ ಸಮ್ಮಿಲನ ಕಾರ್ಯಕ್ರಮವು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಿವಪ್ಪ ನಂತೂರು ಅಧ್ಯಕ್ಷರು ಕಚ್ಚೂರು ಮಾಲ್ತಿದೇವಿ ಬಬ್ಬುಸ್ವಾಮಿ ಮೂಲ ಕ್ಷೇತ್ರ ಬಾರ್ಕೂರು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ಅವರು ಮುಂಡಾಲ ಯುವ ವೇದಿಕೆಯು ಸಮಾಜದ ಅಭ್ಯುದಯ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಅವೈಜ್ಞಾನಿಕ ಒಳಮಿಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾದ ಬಗ್ಗೆ ಹಾಗೂ ಒಳಮಿಸಲಾತಿ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸಂಸದರು ಶಾಸಕರುಗಳಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮುಂಡಾಲ ಸಮುದಾಯದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿತು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮುಂಡಾಲ ಸಮುದಾಯದ ವಿದ್ಯಾರ್ಥಿಗಳಿಗೆ ರಂಗರಾವ್ ಪ್ರತಿಭಾ ಪುರಸ್ಕಾರ ನೀಡಲಾಯಿತು.
ದೈವರಾಜ ಬಬ್ಬುಸ್ವಾಮಿಯ ಚರಿತ್ರೆಯಿರುವ 2025 ನೇ ಸಾಲಿನ ಕ್ಯಾಲೆಂಡರ್ ನ್ನು ಬಿಡುಗಡೆ ಗೊಳಿಸಲಾಯಿತು.
ಗ್ರಾಮೀಣ ಕ್ರೀಡಾ ಕೂಟದ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕರಾದ ಐವನ್ ಡಿಸೋಜ, ವೇದವ್ಯಾಸ ಕಾಮತ್, ಸಂಸದರಾದ ಬ್ರಿಜೇಶ್ ಚೌಟ, ಮನೋಜ್ ಕುಮಾರ್ ಮಹಾ ಪೌರರು ಮಂಗಳೂರು ಮಹಾನಗರ ಪಾಲಿಕೆ ಮಂಗಳೂರು, ಭರತ್ ಕುಮಾರ್ ಮ.ನ.ಪಾ. ಸದಸ್ಯರು, ಸುಕುಮಾರಿ ನವೀನ್, ದಿವ್ಯಾ ಚೇಳ್ಯಾರು ಸದಸ್ಯರು ಚೇಳ್ಯಾರು ಗ್ರಾಮ ಪಂಚಾಯತ್, ಪ್ರಭಾಕರ್ ಕೋಟಿ ಮುರ ಕೆನರಾ ಬ್ಯಾಂಕ್, ಡಾ. ನಯನಾ ಅತ್ತಾವರ ಉಪಾನ್ಯಾಸಕರು ಎಂ.ಜಿ.ಎಂ. ಕಾಲೇಜ್ ಉಡುಪಿ, ಡಾ ಲಾವಣ್ಯ BDS ಡೆಂಟಲ್ ಸರ್ಜನ್ ಮಂಗಳೂರು, H ಸುಷ್ಮಾ ಸೇಫ್ಟಿ ಆಫೀಸರ್ .ಎನ್.ಎಂ.ಪಿ.ಎ.ಮತ್ತಿತರರು ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಮಂಜುನಾಥ್ ಕರ್ಕೇರ ಅಧ್ಯಕ್ಷರು ಮುಂಡಾಲ ಯುವ ವೇದಿಕೆ ಪಡುಬಿದ್ರಿ (ರಿ), ಶ್ರೀ ಜಗನಾಥ ಎರ್ಮಾಳ್ ಗೌರವ ಸಲಹೆಗಾರರು ಕರ್ಕೇರಾ ಮೂಲ ಸ್ಥಾನ ಉಡುಪಿ ಇವರು ಹಾಜರಿದ್ದರು.
ಯುವ ವೇದಿಕೆಯ ಅಧ್ಯಕ್ಷರಾವ ರವಿ ಕಾಪಿಕಾಡ್ ರವರು ಸ್ವಾಗತಿಸಿದರು, ರಘುರಾಜ್ ಕದ್ರಿ ಪ್ರಾಸ್ತಾವಿಕವಾಗಿ ವೇದಿಕೆಯ ಬಗ್ಗೆ ಮಾಹಿತಿ ನೀಡಿದರು. ರಘವೀರ್ ಬಾಬುಗುಡ್ಡ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ಸಂಚಾಲಕಿ ಚೈತ್ರ ಮುಲ್ಲಕಾಡ್ ಧನ್ಯವಾದ ಸಲ್ಲಿಸಿದರು.
ನಂತರ ಐಲೇಸ - 2 ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮವನ್ನು ಸ್ಥಾಪಕಾಧ್ಯಕ್ಷ ಕಿರಣ್ ಕುಮಾರ್ ಹಾಗೂ ವಿನಯನೇತ್ರ ದಡ್ಡಲ್ ಕಾಡ್ ರವರು ನೇರವೇರಿಸಿದರು.