ಮಂಗಳೂರು:  ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಮಂಗಳೂರು ಇಲ್ಲಿ  2025-26ನೇ ಸಾಲಿನ ವಿವಿಧ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಪ್ರವೇಶ ಬಯಸುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಖುದ್ದಾಗಿ ಸಂಸ್ಥೆಗೆ  ಭೇಟಿ ನೀಡಿ   ಆಗಸ್ಟ್  31ರೊಳಗೆ ಪ್ರವೇಶ ಪಡೆಯಬಹುದು.

ಬಾಕಿ ಉಳಿದಿರುವ ಸೀಟುಗಳ ವಿವರ:- ಕಂಪ್ಯೂಟರ್ ಆಪರೇಷನ್ ಆ್ಯಂಡ್  ಪ್ರೋಗ್ರಾಮಿಂಗ್ ಅಸಿಸ್ಟಂಟ್ (17 ಸೀಟುಗಳು ಬಾಕಿ),  ಇಲೆಕ್ಟ್ರಾನಿಕ್ ಮೆಕ್ಯಾನಿಕ್ (32 ಸೀಟುಗಳು ಬಾಕಿ), ಇಲೆಕ್ಟ್ರಿಷಿಯನ್ (9 ಸೀಟುಗಳು ಬಾಕಿ), ಸಿ.ಎನ್.ಸಿ ಮೆಷಿನಿಂಗ್ ಟೆಕ್ನಿಷಿಯನ್ (24 ಸೀಟುಗಳು ಬಾಕಿ), ವರ್ಚುವಲ್ ಅನಾಲಿಸಿಸ್ ಆ್ಯಂಡ್ ಡಿಸೈನರ್ – ಎಫ್.ಇ.ಎಮ್ (24 ಸೀಟುಗಳು ಬಾಕಿ), ಇಂಡಸ್ಟ್ರಿಯಲ್ ರೋಬೋಟಿಕ್ಸ್ ಆ್ಯಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ (20 ಸೀಟುಗಳು ಬಾಕಿ), ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್  ಕಂಟ್ರೋಲ್ ಆ್ಯಂಡ್ ಅಟೊಮೇಷನ್ (20 ಸೀಟುಗಳು ಬಾಕಿ), ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್ (10 ಸೀಟುಗಳು ಬಾಕಿ).

ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಅಥವಾ ದೂರವಾಣಿ ಸಂಖ್ಯೆ 9880119147,  9448858417, 9620766870 ಸಂಪರ್ಕಿಸಬಹುದು ಎಂದು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಕಟಣೆ ತಿಳಿಸಿದೆ.