ಮಂಗಳೂರು, ಅ.16: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಹೊೈಗೆ ಬಜಾರ್‍ ನ ಆವರಣದಲ್ಲಿರುವ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದ ಅಧೀನದಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಜಿತ ಯೋಜನೆಯಾದ ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದಲ್ಲಿ ನವೆಂಬರ್ ತಿಂಗಳ 3ನೇ ವಾರದಲ್ಲಿ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿಯಲ್ಲಿ ಅಕ್ವೇರಿಯಂ ಜೋಡಣೆ, ನಿರ್ವಹಣೆ, ಅಲಂಕಾರಿಕಾ ಮೀನುಗಳ ಸಾಕಣೆ, ಮರಿಉತ್ಪಾದನೆ, ಉದ್ಯಮಶೀಲತೆ, ಮಾರಾಟ, ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಲಾಗುತ್ತದೆ.

ಒಂದು ತರಬೇತಿಯಲ್ಲಿ ಒಟ್ಟು 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಿರುದ್ಯೋಗಿ ಪದವಿದರರು, ಕಾಲೇಜು ವ್ಯಾಸಂಗವನ್ನು ಮೊಟಕುಗೊಳಿಸಿರುವ ಯುವಕ-ಯುವತಿಯರಲ್ಲಿ ಸ್ವಉದ್ಯೋಗಾಂಕ್ಷಿಗಳು, ಸ್ವಯಿಚ್ಛೆಯಿಂದ ವ್ಯಾಪಾರ ಮಾಡಬಯಸುವ ಕರ್ನಾಟಕ ಕರಾವಳಿಯ ನಿವಾಸಿಗಳಿಂದ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಕಾಲೇಜಿನ ವೆಬ್‍ಸೈಟ್: www.cofm.edu.in ಯಿಂದ ಡೌನ್‍ಲೋಡ್ ಮಾಡಿ ಇಮೇಲ್: sdfstc2023@gmail.com ಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ.

ಹೆಚ್ಚಿನ ಮಾಹಿತಿಗೆ ತರಬೇತಿಯ ಸಂಯೋಜಕರು ಹಾಗೂ ಯೋಜನೆಯ ಪ್ರಧಾನ ಸಂಶೋಧಕರು (ಮೊಬೈಲ್ ಸಂಖ್ಯೆ: 99169 24084 ಅಥವಾ 86186 60949) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.