ಮಂಗಳೂರು: ಬಿ-ಹ್ಯೂಮನ್ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಹೆಜ್ಜೆಯಿಟ್ಟಿದ್ದು, ಸಂಸ್ಥೆಯ ವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ಮತ್ತು ಏಡ್ಸ್ ವಿಭಾಗಕ್ಕೆ ಎರಡು ಶುದ್ಧ ಕುಡಿಯುವ ನೀರಿನ ವಿತರಣಾ ಯಂತ್ರ ದೇಣಿಗೆಯಾಗಿ ಬುಧವಾರ ನೀಡಲಾಯಿತು.  

ಟೀಮ್ ಬಿ-ಹ್ಯೂಮನ್ ಟ್ರಸ್ಟಿ ಶೆರೀಫ್ ಬೋಳಾರ್, ಕಾರ್ಪೊರೇಟರ್  ಅಬ್ದುಲ್ ರವೂಫ್ ಬಜಾಲ್ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ  ರವೂಫ್, ಸಂಸ್ಥೆಯು ಜಾತಿ, ಮತ, ಧರ್ಮ ಬೇಧವಿಲ್ಲದೆ ಬಡವರಿಗೆ ಮತ್ತು ಕಷ್ಟದಲ್ಲಿ ಇರುವವರಿಗೆ ನಿರಂತರ ಸಹಾಯ ಮಾಡುತ್ತಿದೆ. ಇವರ ನಿಸ್ವಾರ್ಥ ಸೇವೆ ಕಾರ್ಯ ಶ್ಲಾಘನೀಯ ಎಂದರು. 

ಬಿ-ಹ್ಯೂಮನ್ ಸಂಸ್ಥೆಯ ಉಪಾಧ್ಯಕ್ಷ ಅಡ್ವಕೇಟ್ ಜಿಶಾನ್ ಮಾತನಾಡಿ, ಸಂಸ್ಥೆಯು ನಗರದ ಸುಮಾರು 90 ರೋಗಿಗಳಿಗೆ ಪ್ರತಿ ತಿಂಗಳು ಉಚಿತ 1000 ಡಯಾಲಿಸಿಸ್ ಸೇವೆ ಒದಗಿಸುತ್ತಿದೆ. ಜೊತೆಗೆ  ಇತರ ರೋಗಿಗಳಿಗೆ ಸಹಾಯ ನೀಡುತ್ತಾ ಬಂದಿದೆ. ಮೂಡಬಿದ್ರಿ ಸರಕಾರಿ ಆಸ್ಪತ್ರೆಯ ಡಯಾಲಿಸಿ ಸೆಂಟರ್ ಗೆ ಶುದ್ಧ ನೀರಿನ ಯಂತ್ರ, ಕಾಪುವಿನ ವ್ರದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ಪೂರೈಸಿದೆ ಎಂದರು. 

ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವ ಪ್ರಕಾಶ್  ಬಿ-ಹ್ಯೂಮನ್ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶಂಸ ವ್ಯಕ್ತಪಡಿಸಿದರು.

ರಂಜಾನ್ ಪ್ರಯುಕ್ತ ಮಕ್ಕಳ ವಾರ್ಡ್ ಹಾಗೂ ಏಡ್ಸ್ ವಿಭಾಗದ ರೋಗಿಗಳಿಗೆ ಹಣ್ಣು ಹಂಪಲು ಇದೇ ವೇಳೆ ವಿತರಿಸಲಾಯಿತು.

ಈ ಸಂದರ್ಭ ಬಿ-ಹ್ಯೂಮನ್ ಸ್ಥಾಪಕ ಆಸಿಫ್ ಡೀಲ್, ಅಬ್ಬಾಸ್ ಉಚ್ಚಿಲ್, ನವಾಝ್ ವೈಟ್ ಸ್ಟೋನ್, ಹನೀಫ್ ತೋಡಾರ್, ರಮೀಝ್, ಬಶೀರ್ ಕಣ್ಣೂರು, ಸಾದಿಕ್ ಎನ್ಎಂಸಿ, ನಝೀರ್ ಬಜಾಲ್, ರಹಿಮಾನ್, ಮನೋಜ್ ಯೆಯ್ಯಾಡಿ, ಮೊಹಮ್ಮದ್ ಶಫೀಕ್, ಹನೀಫ್ ತೋಡಾರ್, ಡಾ ಸುಧಾಕರ್, ಡಾ.ಭೂಷಣ್ ಶೆಟ್ಟಿ ಉಪಸ್ಥಿತರಿದ್ದರು.