ಮಂಗಳೂರು:  ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ವತಿಯಿಂದ ರಕ್ತದ ಮಧು ಮೇಹ ತಪಾಸಣಾ ಶಿಬಿರವನ್ನು ನಡೆಸಾಯಿತು.

ಮಾಸಿಕ  ಕುಟುಂಬ ಸಮ್ಮಿಲನದ ಸಂಧರ್ಭದಲ್ಲಿ ಮಂಗಳೂರಿನ‌ ಕದ್ರಿ ಅಶೋಕ ಭವನ ಸಭಾಂಗಣದಲ್ಲಿ ಅಧ್ಯಕ್ಷೆ  ಲಯನ್ಸ್ ಸುಮಿತ್ರಾ ವಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ನೂರಿಪ್ಪತ್ತು ಮಂದಿ ತಮ್ಮ‌ರಕ್ತದ ಪರಿಶೀಲನೆ ಮಾಡಿಸಿಕೊಂಡರು. ವೈದ್ಯರಾಗಿ ಲಯನ್ಸ್ ಡಾ ಸುರೇಶ ನೆಗಳಗುಳಿ ಇವರು ಈ ಶಿಬಿರವನ್ನು ಸುಸೂತ್ರವಾಗಿ ನೆರವೇರಿಸಿದರು.

ಕಾರ್ಯದರ್ಶಿ ಲ.ಶ್ರೀಧರ್, ಲಯನ್ಸ್  ವಿಜಯ ಶೆಟ್ಟಿ,ಲಯನ್ ಮಂಜುಳಾ ಶೆಟ್ಟಿ , ಲಯನ್ಸ್ ಎನ್ ಟಿ ರಾಜಾ, ಲಯನ್ಸ್ ಗೋವಿಂದ ಶರ್ಮ, ಲಯನ್ಸ್ ಭುವನೇಶ್, ಲಯನ್ಸ್ ರತ್ನಾಕರ್  ಲಯನ್ಸ್ ಸುಜಿತ್ ಕುಮಾರ,ಲಯನ್ ವೆಂಕಟ್ ರಾಯ ನಾಯಕ್  ,ಲಯನ್ಸ್     ಜಗದೀಶ್ ಪೈ , ಲಯನ್ಸ್ ವಿದ್ಯಾ ನಾಯಕ್  ಲಯನ್ಸ್ ಸತೀಶನ್, ಲಯನ್ಸ್ ಶಂಕರ ನಾರಾಯಣ, ಲಯನ್ಸ್  ಜ್ಯೋತಿ, ಲಯನ್ಸ್  ಕೇಶವ ಭಟ್  ಲಯನ್ಸ್ ರಾಮ‌ಮುಗ್ರೋಡಿ,ಲಯನ್ಸ್ ಪ್ರಶಾಂತ್ ಪೈ, ಲಯನ್ಸ್ ಪೂಜಾ ಪೈ, ಲಯನ್ಸ್ ಪ್ರವೀಣ್ ಶೆಟ್ಟ  ಲಯನ್ಸ್     ಮುಂತಾದ ಗಣ್ಯರು ಉಪಸ್ಥಿತರಿದ್ದರು

ಡಾ ಸುರೇಶ ನೆಗಳಗುಳಿಯವರನ್ನು ಈ ಸಂದರ್ಭದಲ್ಲಿ ಶಾಲು ಹಾಕಿ ಗೌರವಿಸಲಾಯಿತು.

ಮಧುಮೇಹ ತಪಾಸಣೆ ತೀರಾ ಅಗತ್ಯ. ಅಗತ್ಯ ತಪಾಸಣೆಗಳನ್ನು ಕಾಲ ಕಾಲಕ್ಕೆ ನಡೆಸುತ್ತಿರ ಬೇಕು. ಆಹಾರ ವಿಹಾರ ವ್ಯಾಯಾಮ ಯೋಗಗಳ ಬಗ್ಗೆ ನಿಗಾ ಇರಿಸ ಬೇಕು. ಮಧುಮೇಹವು ರಕ್ತಛಾಪ ಹಾಗೂ ರಕ್ತದ ಕೊಬ್ಬುಗಳಿಗೆ ಬಹಳ ಸಮೀಪ ವರ್ತಿಯಾಗಿದೆ. ಹೃದಯ ಸಂಬಂಧೀ ಕಾಯಿಲೆಗಳಿಗೆ ಇವು ರಹದಾರಿಯಾಗ ಬಹುದು. ಔಷಧಿ ಮೇಲೆ ಇರುವವರು ತಪ್ಪಿಸದೇ ಬಳಸ ಬೇಕು ಎಂದವರು ಕಿವಿಮಾತು ಹೇಳಿದರು

ಇದೇ ವೇಳೆ ಜನವರಿಯಲ್ಲಿ ನಡೆಯಲಿರುವ ಅದ್ದೂರಿಯ ಕನ್ನಡ ಕಲರವ ಸಮಾರಂಭದ ಪೂರ್ವಭಾವಿ ರೂಪುರೇಷೆ ಗಳನ್ನು ಸಹ ಈ ಸಂದರ್ಭದಲ್ಲಿ ಸಂಚಾಲಕ ಅಧ್ಯಕ್ಷ ಲಯನ್ಸ್ಎನ್ ಟಿ ರಾಜಾ ನೆರವೇರಿಸಿದರು. ಲಘು ಮನೋರಂಜನೆ ಸಹಿತವಾಗಿ ಸಮಾರಂಭ ಯಶಸ್ವಿಯಾಗಿ ನೆರವೇರಿತು.