ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಮಹಿಳಾ ಘಟಕದ ಆಶ್ರಯದಲ್ಲಿ ವಧೂ-ವರರ ಅನ್ವೇಷಣೆ ಕಾರ್ಯಕ್ರಮ ಇತ್ತೀಚೆಗೆ ಬಂಟ್ಸ್ ಹಾಸ್ಟೆಲ್ ಆವರಣದ ಅಮೃತ ಮಹೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ಅವರು ಮಾತನಾಡಿ, ಬಂಟ ಸಮಾಜದ ವಿವಾಹ ಅಪೇಕ್ಷಿ ತರಿಗೆ ಅನುಕೂಲ ಕಲ್ಪಿಸಲು ಈ ವೇದಿಕೆ ಆರಂಭಿಸಿದ್ದು, ಇದರಲ್ಲಿ ಮಹಿಳಾ ಸಮಿತಿಯ ಸದಸ್ಯೆಯರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು. ಸಮಾಜದ ಬಂಧುಗಳು ವಿವಾಹ ವೇದಿಕೆಯ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಬಂಟರಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್ ರೈ ಪದವು ಮೇಗಿನ ಮನೆ, ಮಂಗಳೂರು ತಾಲೂಕು ಸಮಿತಿಯ ಹರೀಶ್ ಶೆಟ್ಟಿ ಬಜ್ಪೆ, ಮಹಿಳಾ ಘಟಕದ ಅಧ್ಯಕ್ಷೆ ಸಬಿತಾ ಶೆಟ್ಟಿ, ವಿವಾಹ ವೇದಿಕೆಯ ಅಧ್ಯಕ್ಷೆ ಶಾಂಭವಿ ರೈ, ಕಾರ್ಯದರ್ಶಿ ಇಂದಿರಾ ರೈ, ಕೋಶಾಧಿಕಾರಿ ಚಂಚಲಾಕ್ಷಿ ಶೆಟ್ಟಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸತೀಶ್ ಶೆಟ್ಟಿ ಕೊಡಿಯಾಲಬೈಲ್ ಕಾರ್ಯಕ್ರಮ ನಿರೂಪಿಸಿದರು.