ಮಂಗಳೂರು: ಸಿಬಿಎಸ್‍ಎ ಸಿಇಒ ಬೆಂಗಳೂರು ಹಾಗೂ ಶಕ್ತಿ ವಸತಿ ಶಾಲೆಯ ಜಂಟಿ ಆಶ್ರಯದಲ್ಲಿ “ಸಮಾಜ ಶಾಸ್ತ್ರದ ಸಾಮಥ್ರ್ಯಆಧಾರಿತ ಮೌಲ್ಯಮಾಪನ” ವಿಷಯದ ಕುರಿತು 2 ದಿನಗಳ ಸಿಬಿಎಸ್‍ಇ ಅಧ್ಯಾಪಕರಿಗೆ ಕಾರ್ಯಗಾರವು ಉದ್ಘಾಟನೆಗೊಂಡಿತು.

ಉದ್ಘಾಟನೆಯನ್ನು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ರವಿಶಂಕರ್ ವಿದ್ಯಾ ಮಂದಿರದ ಮಂಗಳೂರಿನ ಪ್ರಾಂಶುಪಾಲರಾದ ಸುರೇಶ ಮಹಾಲಿಂಗಪುರ್ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಮಂಗಳೂರಿನ ಪ್ರಾಂಶುಪಾಲರಾದಶ್ರೀಮತಿ ಶೀಲ ಬಾಲಮುರಳಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತ ಸೂರಜ್ ಉಪಸ್ಥಿತರಿದ್ದರು. ಈ ಕಾರ್ಯಗಾರವುಇಂದು ಮತ್ತು ನಾಳೆ ಶಕ್ತಿ ರೆಸಿಡೆನ್ಶಿಯಲ್ ಶಾಲೆಯರೇಷ್ಮ ಮೆಮೊರಿಯಲ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಗಾರದಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಿಬಿಎಸ್‍ಇ ಶಾಲೆಗಳಿಂದ 60 ಶಿಕ್ಷಕರು ಭಾಗವಹಿಸಿರುತ್ತಾರೆ.




ಕಾರ್ಯಕ್ರಮದ ನಿರೂಪಣೆಯನ್ನು ಸ್ಮಿಶಾ ವಿನಿಲ್ ನಡೆಸಿಕೊಟ್ಟರು.