(ಫೋಟೋಸ್ / ವರದಿ ರೋನ್ಸ್ ಬಂಟ್ವಾಳ್)
ಮುಂಬಯಿ: ನಲ್ಲಸೋಫರಾ ಪೂರ್ವದ ಸೆಂಟ್ರಲ್ ಪಾರ್ಕ್‍ನಲ್ಲಿನ ಸೈಂಟ್ ಫ್ರಾನ್ಸಿಸ್ ದೆ'ಸಾಲ್ಸ್ ಇಗರ್ಜಿಯಲ್ಲಿನ ಕೊಂಕಣಿ ಕಥೋಲಿಕ್ ಅಸೋಸಿಯೇಶನ್ 2024ನೇ ವಾರ್ಷಿಕ ಕನ್ಯಾ ಮಾತೆ ಮರಿಯಮ್ಮ ಅವರ ಹುಟ್ಟು ಹಬ್ಬ `ಮೋಂತಿ ಫೆಸ್ತ್'ನ್ನು ಕಳೆದ ಆದಿತ್ಯವಾರ ಪ್ರಕೃತಿಮಾತೆಯ ಸ್ಮರಣೆಯೊಂದಿಗೆ ವಿಜೃಂಭನೆಯಿಂದ ಆಚರಿಸಿತು.

ಧರ್ಮಗುರು ರೆ| ಫಾ| ಸಂತೋಷ್ ಸಾಲ್ವಿ ಅವರು ದವಸ-ಧಾನ್ಯ, ತರಕಾರಿಗಳನ್ನು ಆಶೀರ್ವಾದಿಸಿ ನೆರೆದ ಭಕ್ತಾದಿಗಳಿಗೆ ವಿತರಿಸಿ ಹೊಸ ಫಸಲಿನಿಂದ ಸಿದ್ಧಪಡಿಸಿದ ಶುದ್ಧ ಶಾಖಾಹಾರಿ ಭೋಜನ ಆಶೀರ್ವದಿಸಿದರು.






ಅಸೋಸಿಯೇಶನ್‍ನ ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೋ ಕಾರ್ಯಕ್ರಮ ನಿರೂಪಿಸಿ ಹಬ್ಬದ ಆಚರಣೆ ಕುರಿತು ತಿಳಿಸಿದರು. ಸಮಿತಿ ಸದಸ್ಯರುಗಳಾದ ರೊನಿ ಪಾಯ್ಸ್, ರೋಯ್ಗ್‍ಟನ್ ಕಾಖ, ಡೈನಾ ಮೊರಾಯಸ್, ಲವಿನಾ ಡಿಸೋಜಾ, ಹಿಲ್ಡಾ ಡಿಸೋಜಾ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದು ದೇವಮಾತೆಯ ಜನ್ಮೋತ್ಸವದ ಯಶಸ್ಸಿಗೆ ಶ್ರಮಿಸಿದರು. ಶುದ್ಧೀಕೃತ ಭತ್ತದ ತೆನೆಯ ಸಂಪ್ರಾದಾಯಿಕ ಹೊಸ ಊಟದೊಂದಿಗೆ ಹಬ್ಬವು ಸಮಾಪನ ಗೊಂಡಿತು.