ಮಂಗಳೂರು: ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಾನಗರಪಾಲಿಕೆ  ಸಂಯುಕ್ತಾಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ  ದಸರಾ ಕ್ರೀಡಾಕೂಟದ  ಬಾಸ್ಕೆಟ್ ಬಾಲ್ ಸ್ಪರ್ಧೆಯನ್ನು  ಪುರುಷ ಹಾಗೂ ಮಹಿಳೆಯರಿಗಾಗಿ ಸೆಪ್ಟೆಂಬರ್ 6 ರಂದು ನಗರದ ಮಂಗಳಾ ಕ್ರೀಡಾಂಗಣ  ಸಂಕೀರ್ಣದಲ್ಲಿರುವ ಯು. ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ  9 ಗಂಟೆಗೆ  ನಡೆಯಲಿದೆ.

ಬಾಸ್ಕೆಟ್‍ಬಾಲ್  ಸ್ಪರ್ಧೆಯಲ್ಲಿ  ಭಾಗವಹಿಸುವ  ದಕ್ಷಿಣ  ಕನ್ನಡ ಜಿಲ್ಲೆಯ ವಿವಿಧ  ತಾಲೂಕುಗಳ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳು ತಮ್ಮ ವಿವರಗಳನ್ನು ಮೊಬೈಲ್ https://dasaracmcup.2025.etrpindia.com/KA-sports ಅಥವಾ ಕ್ಯೂ ಆರ್ ಕೋಡ್‍ನಲ್ಲಿ  ನೊಂದಾಯಿಸಿಕೊಳ್ಳಬೇಕು.  ಭಾಗವಹಿಸುವ ಕ್ರೀಡಾಪಟುಗಳು  ಸೆಪ್ಟೆಂಬರ್ 6ರಂದು  ಬೆಳಿಗ್ಗೆ  8.30 ಗಂಟೆಗೆ ಯು. ಎಸ್. ಮಲ್ಯ ಒಳಾಂಗಣ  ಕ್ರೀಡಾಂಗಣದಲ್ಲಿ  ಹಾಜರಾಗಬೇಕು.

ಹೆಚ್ಚಿನ  ಮಾಹಿತಿಗೆಮಂಗಳಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ  ಕಚೇರಿ (ದೂರವಾಣಿ ಸಂಖ್ಯೆ: 0824-2451264) ಯನ್ನು  ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.