ಮಂಗಳೂರು, ಮೇ 22: ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಪ್ರತಿಷ್ಠಿತ ಭೂ ಒಡೆತನ ಯೋಜನೆಯನ್ನು ಅನುಷ್ಟಾನಗೊಳಿಸಲು ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಅರ್ಜಿದಾರರಿಂದ ಎಡಮಂಗಲ (ಕಡಬ ತಾಲೂಕು), ಸುಳ್ಯ ಕಸಬ (ಸುಳ್ಯ), ಜಾಲ್ಸೂರು (ಸುಳ್ಯ), ಕಡೇಶಿವಾಲಯ (ಬಂಟ್ವಾಳ ತಾಲೂಕು)ಗ್ರಾಮಗಳಲ್ಲಿ ಅರ್ಜಿಗಳು ಸ್ವೀಕೃತಗೊಂಡಿರುತ್ತದೆ.
ಫಲಾಪೇಕ್ಷಿಗಳಿಗೆ ನಿಗಮದ ಮುಖಾಂತರ ಕನಿಷ್ಟ 0.50 ರಿಂದ 1.00 ಎಕ್ರೆ ಕೃಷಿ ಮತ್ತು ಕೃಷಿ ಯೋಗ್ಯ ಜಮೀನನ್ನು ಖರೀದಿ ಮಾಡಿ ನೀಡಬೇಕಾಗಿರುವುದರಿಂದ ನಿಗಮಕ್ಕೆ ಜಮೀನು ಮಾರಾಟ ಮಾಡಲು ಆಸಕ್ತಿ ಹೊಂದಿರುವ ಭೂ ಮಾಲೀಕರು ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬೇಕು.
ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು ಹಾಗೂ ತಲಾ ಎಕರೆಗೆ ರೂ.20 ಲಕ್ಷದವರೆಗೆ ದರ ನಿಗದಿಪಡಿಸಲಾಗುತ್ತದೆ. ಅರ್ಜಿದಾರರ ವಾಸಸ್ಥಳದಿಂದ 10 ಕಿ.ಮೀ ವ್ಯಾಪ್ತಿಯ ಒಳಗಡೆ ಇರುವ ಜಮೀನನ್ನು ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮೇ 26 ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ನಗರದ ಜಿ.ಎಚ್.ಎಸ್‍ರಸ್ತೆಯಜನತಾ ಬಜಾರ್ ಕಟ್ಟಡದ 2ನೇ ಮಹಡಿಯಲ್ಲಿರುವಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರನ್ನು (ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ:0824-2951814) ಸಂಪರ್ಕಿಸಬಹುದು ಎಂದು ನಿಗಮದಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.