ಮಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ-2ಎಗೆ ಸೇರಿದ ಮಡಿವಾಳ ಮತ್ತು ಅದರ ಉಪಜಾತಿಗಳಿಗೆ ಸೇರಿದ ಜನಾಂಗದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ರೂ. 3.75 ಲಕ್ಷಗಳು  ಇದರಲ್ಲಿ ವಿದ್ಯುದ್ಧೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಮೆಸ್ಕಾಂಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ. 50,000/-ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಕನಿಷ್ಠ 1 ಎಕರೆ ಜಮೀನು ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.