ಮಂಗಳೂರು, ಸೆ. 22: ಮೀನುಗಾರಿಕಾ ಮಹಾವಿದ್ಯಾಲಯದ ವತಿಯಿಂದ ಸೋಮೇಶ್ವರ ಕಡಲ ತೀರದಲ್ಲಿ ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಶನಿವಾರ ಹಮ್ಮಿಕೊಳ್ಳಲಾಯಿತು. 

ಮೀನುಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವೃಂದ, ರಾಷ್ಟ್ರೀಯ ಸೇವಾ ಯೋಜನೆ, SEA= MC2 ಮತ್ತು ಪುರಸಭೆ ಸೋಮೇಶ್ವರ ವೃಂದದಿಂದ ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. 

ಕಾರ್ಯಕ್ರಮದಲ್ಲಿ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ , ಸೋಮನಾಥ ದೇವಾಲಯದ ವ್ಯವಸ್ಥಾಪನಾ ಸದಸ್ಯ ಭಾಸ್ಕರ್ ಗಟ್ಟಿ, SEA= MC2 ಪ್ರಧಾನ ನಿರ್ದೇಶಕಡಾ.ಶಿವಕುಮಾರ ಮಗದ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಪರಿಸರದ ಪ್ರಾಮುಖ್ಯತೆಯನ್ನು ತಿಳಿಸಲು ಸ್ವಚ್ಛತಾ ಅಭಿಯಾನವನ್ನು ನಡೆಸಿದರು. ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹೆಚ್. ಎನ್. ಆಂಜನೇಯಪ್ಪ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. 

ಮೀನುಗಾರಿಕಾ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣಾ ವಿಭಾಗದ ಮುಖ್ಯಸ್ಥಡಾ.ಎಸ್.ಆರ್. ಸೋಮಶೇಖರ,  ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಡಾ.ಪ್ರದೀಪ್ ಎಲ್. ದೊಡ್ಡಮನಿ, ಮತ್ತು ಡಾ. ಮಧು, ಡಿ. ಎಮ್. ಸಹಾಯಕ ಪ್ರಾಧ್ಯಾಪಕರು, ಮೀನುಗಾರಿಕಾ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣಾ ವಿಭಾಗ, ಹೆಡ್ ಆಫ್ ಡಿವಿಶನ್ (ಮೀನುಗಾರಿಕೆ)ವಿಭಾಗದ ಡಾ. ಎಸ್. ವರದರಾಜು, ಸೋಮೇಶ್ವರ ಗ್ರಾಮದ ಸ್ಥಳೀಯರು ಮತ್ತು ಪುರಸಭೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.