ಮಂಗಳೂರು: ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿ, ಹೊಸ ಎತ್ತರಕ್ಕೊಯ್ದ ಮಾಂಡ್ ಸೊಭಾಣ್ ಪ್ರವರ್ತಿತ ಕಲಾಕುಲ್ ನಾಟಕ ರೆಪರ್ಟರಿಗೆ, ನಾಟಕ ಕಲಿಯುವ ಆಸಕ್ತಿ ಇರುವ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. 15 ರಿಂದ 35 ವರ್ಷದೊಳಗಿನ 20 ಜನರಿಗೆ ಅವಕಾಶವಿದ್ದು ಒಂದು ವರ್ಷದ ಸಮಗ್ರ ರಂಗಭೂಮಿ ತರಬೇತಿಯೊಡನೆ ಡಿಪ್ಲೊಮಾ ಪದವಿ ನೀಡಲಾಗುವುದು. ಮಾಸಿಕ ರೂ 2500/- ಕಲಿಕಾ ಭತ್ತೆ (stipend) ಹಾಗೂ ಪ್ರದರ್ಶನಗಳಿಗೆ ಹೆಚ್ಚುವರಿ ಭತ್ತೆ ನೀಡಲಾಗುವುದು. ದೇಶ ವಿದೇಶಗಳಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶವಿದ್ದು ಸಿನೆಮಾ ಕ್ಷೇತ್ರದ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಲಾಗುವುದು. ಈ ತರಬೇತಿಯು 01 ಜುಲಾಯಿ 2025 ರಿಂದ ಆರಂಭಗೊಂಡು 30 ಜೂನ್ 2026 ವರೆಗೆ, ಸೋಮವಾರದಿಂದ ಶುಕ್ರವಾರ ಸಂಜೆ 6.00 ರಿಂದ 8.30 ತನಕ ನಡೆಯಲಿದೆ.

ಕಲಾಕುಲ್ 2008 ರಲ್ಲಿ ಸ್ಥಾಪನೆಗೊಂಡಿದ್ದು, ಇದುವರೆಗೆ 14 ತಂಡಗಳಲ್ಲಿ 100ಕ್ಕೂ ಮಿಕ್ಕಿ ಕಲಾವಿದರಿಗೆ ರಂಗ ತರಬೇತಿ ನೀಡಲಾಗಿದೆ. ಆಧುನಿಕ ರಂಗಭೂಮಿಗೆ 60 ನಾಟಕಗಳನ್ನು ನೀಡಿದ್ದು, ಭಾರತ ಮತ್ತು ಗಲ್ಫ್ ದೇಶಗಳಲ್ಲಿ 250ಕ್ಕೂ ಮಿಕ್ಕಿ ಪ್ರದರ್ಶನಗಳು ನಡೆದಿವೆ.

ಹೆಸರು ನೋಂದಾಯಿಸಲು  ಮತ್ತು ಹೆಚ್ಚಿನ ಮಾಹಿತಿಗೆ +91 63640 22333 / +91 81052 26626 ನಂಬರಿಗೆ ಸಂಪರ್ಕಿಸಿ.