ಮಂಗಳೂರು: ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ಕೃತ್ಯವನ್ನು ಖಂಡಿಸಿ ಭಾರತ ದೇಶದ ಸೈನಿಕರು ನೀಡಿದ ಪ್ರತಿರೋಧವನ್ನು ಬೆಂಬಲಿಸಿ ಭಾರತದ ಸೈನಿಕರಿಗೆ ಧೈರ್ಯ ತುಂಬುವ ಮತ್ತು ಭಾರತ ಸರ್ಕಾರ ಕೈಗೊಂಡ ನಿರ್ಧಾರವನ್ನು ಬೆಂಬಲಿಸಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ ಮೇ 10 ರಂದು ಶನಿವಾರ ಸಂಜೆ 4.00ಗಂಟೆಯಿಂದ 6:00 ಗಂಟೆಯವರೆಗೆ ಮಂಗಳೂರಿನ ಪುರಭವನ ಮುಂಭಾಗದಲ್ಲಿರುವ ಸಾರ್ವಜನಿಕ ರಾಜಾಜೀಪಾರ್ಕ್ ಸಭಾಂಗಣದಲ್ಲಿ ಸರ್ವಧಮೀಯರ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಾರ್ಥನೆ ದೇಶದ ಸೈನಿಕರನ್ನು ಬೆಂಬಲಿಸಲು ಮಂಗಳೂರಿನ ಏಲ್ಲಾ ಜನತೆ ಸೈನಿಕರ ಜೊತೆ ನಾವು ಇದ್ದೇವೆ ಎಂದು ತಿಳಿಸಲು ಹಾಗೂ ಕಾಶ್ಮೀರದ ಪಹಲ್ಗಾಮ್ನ ದುರಂತದಲ್ಲಿ ಮೃತರಾದ 28 ಮಂದಿ ದೇಶ ಪ್ರೇಮಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಇದಾಗಿದ್ದು ಈ ಕಾರ್ಯಕ್ರಮದಲ್ಲಿ ಏಲ್ಲಾ ವರ್ಗಗಳ ಜನರು, ಕಾರ್ಮಿಕರು ಭಾಗವಹಿಸಬೇಕಾಗಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ವಿನಂತಿಸಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಪ್ರಕಾಶ್ ಸಲ್ಯಾನ್, ನಾಗೇಂದ್ರ ಕುಮಾರ್, ಕೇಶವ ಮರೋಳಿ,ಅಮೃತ್ ಕದ್ರಿ, ಯು.ಪಿ ಇಬ್ರಾಹಿಂ, ಸಿರಾಜ್ ಬಜ್ಪೆ, ಮೆಲ್ವಿನ್ ಕ್ಯಾಸ್ತಲಿನೋ, ಇಮ್ರಾನ್ ಕುದ್ರೋಳಿ, ಬಾಸ್ಕರ್ ರಾವ್, ಮನುರಾಜ್ ,ಆಲ್ಟ್ಟನ್ ಡಿಕುನ್ಹಾ, ವಸಂತ್ ಶೆಟ್ಟಿ ವೀರನಗರ, ಚಂದ್ರಹಾಸ ಕೋಡಿಕಲ್, ಮಂಜುಳಾ ನಾಯಕ್ ಶಾಂತಲಾ ಗಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.