ಮಂಗಳೂರು, ಫೆ. 4: ತುಳು ಸಂಸ್ಕೃತಿಯ ಪ್ರತೀಕವಾದ ಕಂಬಳವನ್ನು ನಗರಗಳಲ್ಲಿ ನಡೆಸುವ ಮೂಲಕ ಅದನ್ನು ವಿಶ್ವಪ್ರಿಯಗೊಳಿಸುವುದು ನಮ್ಮ ಗುರಿ ಎಂದು ಮಂಗಳೂರು ಕಂಬಳ ಸಮಿತಿಯ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.
ಅವರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಂಬಳ ನಡೆಸಲು ಸಿದ್ಧವಾದ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮೂರು ವರ್ಷ ನಡೆ ಹಾಕಿದ ನಮ್ಮ ಕಂಬಳ ಈ ಬಾರಿ 4ನೇ ವರುಷದ ಹೊಸ್ತಿಲಲ್ಲಿ ಇದೆ. ಹಿರಿಯ ಕಿರಿಯ ಎಂದು ಮೂರು ಓಟದ ವಿಭಾಗಗಳಲ್ಲಿ 6 ಬಗೆಯ ಸ್ಪರ್ಧೆಯಲ್ಲಿ ಬಹುಮಾನ ಇರುತ್ತದೆ. ಈ ಬಾರಿ ಪ್ರವಾಸೋದ್ಯಮ ಇಲಾಖೆಯೊಡನಿರುವ 40 ಟ್ರಾವೆಲ್ ಆಪರೇಟರ್ ಗಳನ್ನು ಆಹ್ವಾನಿಸಲಾಗಿದೆ. ಮುಂದಿನ ಕಂಬಳದ ಹೊತ್ತಿಗೆ ಅವರು ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಕರೆ ತರಲು ಮೊದಲೇ ದಿನ ನಿಗದಿ ಮಾಡಿ ತಿಳಿಸಲಾಗುವುದು. 6ರಂದು ಕಂಕನಾಡಿ ಗರೊಡಿಯ ಚಿತ್ತರಂಜನ್ ಕಂಬಳಕ್ಕೆ ಚಾಲನೆ ನೀಡುವರು. ಗಣೇಶ್ ಕಾರ್ಣಿಕ್ ಇರುವರು. ಸಂಜೆ ಸಮಾರೋಪದಲ್ಲಿ ಗೋಲ್ಡ್ ಫಿಂಚ್‌ನ ಪ್ರಕಾಶ್ ಶೆಟ್ಟಿ, ಮನಪಾ ಕಮಿಷನರ್ ಇರುವರು. 7ರ ಬೆಳಿಗ್ಗೆ ನಡೆಯುವ ಬಹುಮಾನ ವಿತರಣೆ ಸಮಾರಂಭವು ಜಿ. ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನಡೆಸಲಿದ್ದಾರೆ ಎಂದು ಚೌಟ ಹೇಳಿದರು.
ಗುಣಪಾಲ ಕಡಂಬರು ಕಂಬಳ ಚರಿತ್ರೆ ವಿವರಿಸಿದರು. ಈಗ ಲೇಸರ್ ಬೀಮ್ ತಾಂತ್ರಿಕತೆ ಬಳಸುವುದರಿಂದ ನಿಖರವಾದ ಸಮಯ ತಿಳಿದು ತೀರ್ಪು ನೀಡಲು ಸುಲಭವಾಗಿದೆ ಎಂದರು.
ಇದೇ ಕಂಬಳದ ಫೋಟೋ ಸ್ಪರ್ಧೆ ಮತ್ತು ಪೆಯಿಂಟಿಂಗ್ ಸ್ಪರ್ಧೆ ಇಡಲಾಗಿದೆ. ಮಂಗಳೂರು ಕಂಬಳ. ಜಿಮೆಯಿಲ್.ಕಾಮ್ ವಿವರ ಹೊಂದಿದೆ ಎಂದು ಇದರ ಜವಾಬ್ದಾರಿ ಹೊತ್ತ ಪ್ರಜ್ವಲ್ ಸುವರ್ಣ ಮತ್ತು ಕಿಶೋರ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಂದನ್ ಮಲ್ಯ, ಸುಜಿತ್ ಪ್ರತಾಪ್, ಸಚಿನ್ ಶೆಟ್ಟಿ, ಪ್ರೀತಮ್ ಶೆಟ್ಟಿ, ಮುಗರೋಡಿ ಮೊದಲಾದವರು ಉಪಸ್ಥಿತರಿದ್ದರು.