ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 1995 ನೇ ಸಾಲಿನಿಂದ ಪ್ರತಿ ವರ್ಷ ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಗುರುತಿಸಿ, ಗೌರವ ಪ್ರಶಸ್ತಿಯನ್ನು ಮತ್ತು ಮೂರು ಪ್ರಕಾರಗಳ ಅಂದರೆ ಕೊಂಕಣಿ ಕವನ, ಸಣ್ಣಕತೆ, ಕಾದಂಬರಿ, ಲೇಖನ ಹಾಗೂ ಭಾಷಾಂತರ ಪುಸ್ತಕಗಳನ್ನು ಆಯ್ಕೆ ಮಾಡಿ ಪುಸ್ತಕ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಅಂತೆಯೇ 2023 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರಕ್ಕಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ.
ಗೌರವ ಪ್ರಶಸ್ತಿ:
ಕೊಂಕಣಿ ಸಾಹಿತ್ಯ: ಮಾರ್ಸೆಲ್ ಎಮ್. ಡಿಸೋಜ, ಮಂಗಳೂರು,
ಕೊಂಕಣಿ ಕಲೆ: ಹ್ಯಾರಿ ಫೆರ್ನಾಂಡಿಸ್, ಮುಂಬಯಿ,
ಕೊಂಕಣಿ ಜಾನಪದ : ಆಶೋಕ್ ದಾಮು ಕಾಸರಕೋಡ್.
ಪುಸ್ತಕ ಪುರಸ್ಕಾರ:
ಕೊಂಕಣಿ ಕವನ :"ಅಟ್ವೊ ಸುರ್” ಲೇಖಕರು ಮೇರಿ ಸಲೋಮಿ ಡಿಸೋಜ, ಬಂಟ್ವಾಳ
ಕೊಂಕಣಿ ಸಣ್ಣಕತೆ: “ಪಯ್ಲಿ ಭೆಟ್” ಲೇಖಕರು: ಫಾ. ರೊಯ್ಸನ್ ಫೆರ್ನಾಂಡಿಸ್, ಹಿರ್ಗಾನ್
ಕೊಂಕಣಿ ಭಾಷಾಂತರ: “ ಎಕ್ಲೊ ಎಕ್ಸುರೊ” ಲೇಖಕರು: ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ), ಮಂಗಳೂರು
ಗೌರವ ಪ್ರಶಸ್ತಿಯು ರೂ.50,000/-ನಗದು,ಪ್ರಮಾಣ,ಪತ್ರ, ಶಾಲು, ಹಾರ, ಪೇಟ, ಸ್ಮರಣಿಕೆ, ಫಲಪುಷ್ಪಗಳನ್ನು, ಒಳಗೊಂಡಿದೆ. ಪುಸ್ತಕ ಪುರಸ್ಕಾರವು ರೂ.25,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಸ್ಮರಣಿಕೆ ಫಲಪುಷ್ಪಗಳನ್ನು ಒಳಗೊಂಡಿದೆ.
ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಸಮಾರಂಭವು ನವೆಂಬರ್ 10 ರಂದು ಹೊನ್ನಾವರದ ಕಾಸರಕೋಡಿನಲ್ಲಿರುವ ಶ್ಯಾನಭಾಗ್ ರೆಸಿಡೆನ್ಸಿಯ ಅವರಣದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡದ ಉಸ್ತುವಾರಿ ಸಚಿವರಾದ ಮಾನ್ಯ ಮಂಕಾಳ ಎಸ್. ವೈದ್ಯ ಇವರು “ಪ್ರಶಸ್ತಿ ಪ್ರದಾನ” ಮಾಡಲಿರುವರು. ಹಾಗೂ ಕಾರವಾರ ಶಾಸಕರಾದ ಮಾನ್ಯ ಸತೀಶ್ ಸೈಲ್, ಕುಮಟ-ಹೊನ್ನಾವರ ಶಾಸಕರಾದ ಮಾನ್ಯ ದಿನಕರ ಶೆಟ್ಟಿ, ಕಾಸರಕೋಡು ಪಂಚಾಯತಿನ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್ ಹರಿಜನ್ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭವು ಜರಗಲಿದೆ. ಇದರೊಂದಿಗೆ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕೃತರ ಪರಿಚಯ ನೀಡುವ “ಪುರಸ್ಕೃತರೊಂದಿಗೆ ಸಂವಾದ ಕಾರ್ಯಕ್ರಮ” ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
2023ನೇ ಸಾಲಿನ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮವು ಹೊನ್ನಾವರದ ಕಾಸರಕೋಡಿನ ಶಾನಭಾಗ್ ರೆಸಿಡೆನ್ಸಿಯಲ್ಲಿ ನಡೆಯುತ್ತಿರುವುದರಿಂದ ಅಕ್ಟೋಬರ್ 15 ರಂದು ಮದ್ಯಾಹ್ನ 3.00 ಗಂಟೆಗೆ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಆಯ್ಕೆಯ ಪತ್ರಿಕಾ ಪ್ರಕಟಣೆ ಹಮ್ಮಿಕೊಳ್ಳಲಾಗಿದೆ. ಆದುದರಿಂದ ದಯಮಾಡಿ ಈ ವಿಷಯವನ್ನು ತಮ್ಮ ಪತ್ರಿಕೆ /ಮಾದ್ಯಮದಲ್ಲಿ ಪ್ರಚಾರಗೊಳಿಸಿ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೋಳ್ಳುವಂತೆ ಪ್ರಚಾರ ನೀಡಬೇಕಾಗಿ ಈ ಮೂಲಕ ಕೊರಲಾಗಿದೆ.
ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕೃತರ ಪರಿಚಯ ಹಾಗೂ ಭಾವಚಿತ್ರ ಇದರೊಂದಿಗೆ ಲಗತ್ತಿಸಿದೆ.