ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಾಳೆ ಆಗಸ್ಟ್ 14ರಂದು ಮಧ್ಯಾಹ್ನ 2 ರಿಂದ 109 ನಿರಂತರ ಬಗೆನ ಸಂಕೀರ್ತನೆ ಲಕ್ಷ್ಮಿ ವೆಂಕಟರಮಣ ಭಜನಾ ಮಂಡಳಿಯಿಂದ ನಡೆಯಲಿದೆ. 109ನೇ ವರ್ಷದ ಸಂಭ್ರಮದಲ್ಲಿ ಜರಗುತ್ತಿರುವ ಮೂಡುಬಿದಿರೆಯ ಕೃಷ್ಣ ಜನ್ಮಾಷ್ಟಮಿಗೆ ಮೂಲ ದಿ. ವೇಣೂರು ಕೃಷ್ಣಯ್ಯನವರು. ಅವರೇ ವಿನೂತನ ಯಕ್ಷಗಾನೀಯ ಮೊಸರು ಕುಡಿಕೆಯನ್ನು ಪರಿಚಯಿಸಿದವರು.

ಜನ್ಮಾಷ್ಟಮಿಯ ಆಗಸ್ಟ್ 15ನೇ ತಾರೀಖಿನ ದಿನ ಬೆಳಗ್ಗೆ ಗಂಟೆ 9 ರಿಂದ ಕಲ್ಸಂಕದ  ಗೋಪಾಲಕೃಷ್ಣ ದೇವಾಲಯದಲ್ಲಿ ದ್ವಿತೀಯ ವರ್ಷದ ಮುದ್ದುಕೃಷ್ಣ ಮೇಷದ್ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಗಂ.2 ರಿಂದ ರಾತ್ರಿ ಚಂದ್ರೋದಯದವರೆಗೆ ನಿರಂತರ ಭಜನಾ ಸೇವೆ, ಮಹಾಪೂಜೆ, ಅರ್ಘ್ಯ ಪ್ರದಾನ ನಡೆಯಲಿದೆ.

ಮರುದಿನ ತಾ.16ರಂದು ಅಷ್ಟ ಮಹಾ ಮಂತ್ರ ಹೋಮ, ಪೂಜೆ ಅರ್ಚನೆ, ಸಾರ್ವಜನಿಕ ಅನ್ನ ಸಂತರ್ಪಣೆ ತರುವಾಯ ಮಧ್ಯಾಹ್ನ ಗಂ. 3ರಿಂದ ದೇವರ ಶೋಭಾ ಯಾತ್ರೆ ಮತ್ತು ಮೊಸರು ಕುಡಿಕೆ ಉತ್ಸವದ ಪೇಟೆ ಸವಾರಿ ನಡೆದು ದೇವಳದ ಪುಷ್ಕರಿಣಿಯಲ್ಲಿ ಜಲ ಸ್ತಂಭನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.