ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ 05 ಜುಲೈ 2025ರಂದು ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು.  ಕಾರ್ಯಕ್ರಮದ ಮೊದಲು ಹಿರಿಯ ಬರಹಗಾರರಾದ  ಎಡ್ವಿನ್ ನೆಟ್ಟೊ (ಎಡಿ ನೆಟ್ಟೊ)ರವರು ಅಸ್ವಸ್ಥರಿರುವ ಕಾರಣ, ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಅರುಣ್ ಜಿ. ಶೇಟ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ʼವಿವಿಧ ಪ್ರಕಾರಗಳಿರುವ ಕೊಂಕಣಿ ಭಾಷೆಯು, ವಿವಿಧ ವೈವಿಧ್ಯತೆಗಳನ್ನು ಹೊಂದಿದೆ. ಅಕಾಡೆಮಿಯ ಪ್ರಶಸ್ತಿ ಗಳಿಸುವುದು ಜೀವನದ ಅತೀ ದೊಡ್ಡ ಸಾಧನೆ. ಅಕಾಡೆಮಿಯು ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಆಶಿಸುತ್ತೇನೆʼ ಎಂದರು. ಪ್ರಮುಖ ಭಾಷಣಕಾರರಾದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವೆಂಕಟೇಶ್ ನಾಯಕ್ರವರು ಸಾಹಿತ್ಯ, ಕವಿತೆ ಹಾಗೂ ಅಕಾಡೆಮಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಫೆಲ್ಸಿ ಲೋಬೊ, ದೆರೆಬೈಲ್ ಇವರು ಈ ಕವಿಗೋಷ್ಟಿಯನ್ನು ನಡೆಸಿದರು. ಜೋಯ್ಸ್ ಕಿನ್ನಿಗೋಳಿ, ಹೆನ್ರಿ ಮಸ್ಕರೇನ್ಹಸ್, ಎಡ್ವರ್ಡ್ ಲೋಬೊ, ಲಾರೆನ್ಸ್ ಬ್ಯಾಪ್ಟಿಸ್ಟ್, ಜೂಲಿಯೆಟ್ ಫೆರ್ನಾಂಡಿಸ್, ರಾಬರ್ಟ್ ಡಿಸೋಜ, ವಾಸುದೇವ ಶ್ಯಾನ್ಭಾಗ್, ಕುಸುಮಾ ಕಾಮತ್, ಮೆಲ್ವಿನ್ ವಾಸ್ ನೀರ್ಮಾರ್ಗ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.  

ಅಕಾಡೆಮಿ ಸದಸ್ಯರಾದ ಸಮರ್ಥ್‌ ಭಟ್ ರವರು ಧನ್ಯವಾದ ಸಮರ್ಪಿಸಿದರು. ಅಕಾಡೆಮಿ ಸದಸ್ಯರಾದ  ನವೀನ್‌ ಲೋಬೊ, ದಯಾನಂದ ಮಡ್ಕೇಕರ್, ಸಪ್ನಾ ಮೇ ಕ್ರಾಸ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ರೋನಾಲ್ಡ್‌ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.