ಮಂಗಳೂರು: ಕಳೆದ ಏಳು ದಶಕಗಳಿಂದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಿಂದ ಕಾರ್ಯಾಚರಿಸುತ್ತಿರುವ ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ 2.25 ಲಕ್ಷ ಮೌಲ್ಯದ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ  ರಾಜ್ಯಪಾಲೆ  ಬಿ. ಎಂ. ಭಾರತಿಯವರು ಕ್ಲಬಿಗೆ  ಅಧಿಕೃತ ಭೇಟಿ ನೀಡಿದ ವೇಳೆ ಈ ಸೇವಾ ಕಾರ್ಯಗಳು ನಡೆದವು.

8 ಮಂದಿಗೆ ಕೃತಕ ಕಾಲು, 4 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕ್ಯಾನ್ಸರ್ ಪೀಡಿತರಿಗೆ ವೈದ್ಯಕೀಯ ನೆರವು, ಶೈಕ್ಷಣಿಕ ಸಾಧನೆ ಮಾಡಿದವರಿಗೆ ಸನ್ಮಾನ ಹೀಗೆ ಹಲವು ಸೇವಾ ಕಾರ್ಯಗಳು ನಡೆದವು. ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ನಿರಂತರ ಸೇವಾ ಯೋಜನೆಗಳಾದ ಲಯನ್ಸ್ ಯೋಗಾ ಕೇಂದ್ರ, ಶಟಲ್ ಕೋರ್ಟ್, ವ್ಯಾಯಮ ಕೇಂದ್ರ್, ಟೈಪಿಂಗ್ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರ, ಜ್ಞಾನ್ ಕೇಂದ್ರಗಳಿಗೆ ರಾಜ್ಯಪಾಲೆ ಭೇಟಿ ನೀಡಿದರು. ವೆನ್ ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಯನ್ ಲಿಂಬ್ ಸೆಂಟರ ಹಾಗೂ ಬರ್ನ್ ಸೆಂಟರಗೂ ಅವರು ಭೇಟಿ ನೀಡಿ ಸಂತೋಷ ವ್ಯಕ್ತ ಪಡಿಸಿದರು.

ಸಾಯಂಕಾಲ ಲಯನ್ಸ್ ಸೇವಾ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಜ್ಯಪಾಲೆ ಬಿ ಎಂ ಭಾರತಿ ಇವರು 7 ದಶಕಗಳ ಇತಿಹಾಸ ಉಳ್ಳ ಲಯನ್ಸ್ ಕ್ಲಬ್ ಮಂಗಳೂರಿನ  ಸಾಧನೆಯನ್ನು ಶ್ಲಾಘಿಸಿದರು. ಉಪ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಅಧ್ಯಕ್ಷ್ ಜಯರಾಜ್ ಪ್ರಕಾಶ್ ಸ್ವಾಗತಿಸಿದರು. ಕಾರ್ಯದರ್ಶಿ ರವಿಶಂಕರ್ ರೈ ವರದಿ ವಾಚಿಸಿದರು. ಖಜಾಂಚಿ ನಾರಾಯಣ ಕೋಟಿಯಾನ್ ವಂದಿಸಿದರು. ರಮೀಲ  ಶೇಖರ್ ಕಾರ್ಯಕ್ರಮದ ಸಂಯೋಜನೆ ಮಾಡಿದರು. ಮಾಜಿ ರಾಜ್ಯಪಾಲರುಗಳು, ವಿವಿಧ ಕ್ಲಬಗಳ ಪದಾಧಿಕಾರಿಗಳು ಹಾಜರಿದ್ದರು.

ಸೇವಾ ಕಾರ್ಯಗಳ ಸಂಯೋಜಕ ರಿಚರ್ಡ್ ಲೋಬೋರವರು ಅರ್ಹರಿಗೆ ಸಹಾಯ ಧನದ ಚೆಕ್ ವಿತರಿಸಿದರು.