ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಉರ್ವಾ ಮಂಗಳೂರು ಇದರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕೋತ್ಸವ ಅಭಿವ್ಯಕ್ತಿ-2024 ಡಿ. 12 ಮತ್ತು 13 ರಂದು ಉರ್ವ ಚರ್ಚ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವಕ್ಕೆ ಇಮ್ಯಾಕುಲೇಟ್ ಕನ್ಸಪ್ಶೇನ್ ಚರ್ಚ್ ಉರ್ವಾ ಇದರ ಸಹಾಯಕ ಧರ್ಮಗುರುಗಳಾದ ವಂ.ಗುರು ಲ್ಯಾನ್ಸನ್ ಮ್ಯಾಕ್ಸಿಂ ಪಿಂಟೊ ಕಾರ್ಯಕ್ರಮದ ಅಧ್ಯಕ್ಷತೆ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲಾಯ್ಡ್ ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರೌಢ ಶಾಲಾ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಮತ್ತು ಇಮ್ಯಾಕುಲೇಟ್ ಕನ್ಸಪ್ಶೇನ್ ಚರ್ಚ್ ಉರ್ವ ಇದರ ಮುಖ್ಯ ಧರ್ಮಗುರುಗಳಾದ ವಂ.ಗುರು ಬೆಂಜಮಿನ್ ಪಿಂಟೊರವರು ವಹಿಸಿದ್ದರು.
ಪದುವಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್, ಮಂಗಳೂರು ಇದರ ಪ್ರಾಂಶುಪಾಲರಾದ ವಂ.ಗುರು ಅರುಣ್ ವಿಲ್ಸನ್ ಲೋಬೋ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕಲಿಕೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ವಿದ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯಗಳು, ಪ್ರಹಸನ, ಮೈಮ್, ಪಿರಮಿಡ್ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಾದ ರಿನ್ಶಿ ಸಲ್ಡಾನ್ಹಾ, ಇಶಾನ್ ಡಿ ಶೆಟ್ಟಿ, ಆ್ಯನ್ಸಿಯಾ, ಆರುಷ್,ಅಂಕಿತಾ ಮತ್ತು ಅಶ್ವಿಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ರೋಸ್ ಡಿ’ಸೋಜ ಮತ್ತು ಶಾಲಾ ವಿದ್ಯಾರ್ಥಿ ನಾಯಕ ಲೆಸ್ಟನ್ ಶರ್ವಿನ್ ಡಿ’ಸೋಜ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸುಚಿತ್ರ ಮತ್ತು ಪದಾಧಿಕಾರಿಗಳು, ಹೆತ್ತವರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.