ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಮೂರನೇ ದಿನವಾದ ಇಂದು ಬಿಜೆಪಿ ಪಕ್ಷದ ಮುಂದಾಳುಗಳು ಮೂಡುಬಿದಿರೆಯ ವಿದ್ಯಾಗಿರಿಯ ಪ್ರದೇಶದಲ್ಲಿ ಮಂಗಳೂರಿನಿಂದ ಆಗಮಿಸಿದ ರಾಜ್ಯ ರಸ್ತೆ ಸಾರಿಗೆಯ ಬಸ್ಸಿಗೆ ಬಹಳ ಸಂಭ್ರಮದಿಂದ ಸ್ವಾಗತಿಸಿದರು. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಈ ಸಂದರ್ಭದಲ್ಲಿ ಮಾತನಾಡಿ ಮೂಡುಬಿದಿರೆಯ ಜನತೆ ಹಾಗೂ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಪ್ರಾರಂಭವಾಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ಮೂಡುಬಿದಿರೆ ಪುರಸಭಾ ಅಧ್ಯಕ್ಷ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಹಲವಾರು ಪುರಸಭಾ ಸದಸ್ಯರುಗಳು, ಬಿಜೆಪಿ ಮುಂಜಾನೆಗಳು ಹಾಜರಿದ್ದರು.

ಮೂಡುಬಿದಿರೆ ಪೇಟೆಗೆ ಆ ಬಸ್ಸು ಆಗಮಿಸಿದಾಗ ಕಾಂಗ್ರೆಸ್ನ ಮುಂದಾಳುಗಳಾದ ಗ್ಯಾರಂಟಿ ಯೋಜನೆಯ ಅರುಣ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್, ಮೂಡ ಅಧ್ಯಕ್ಷ ಹರ್ಷವರ್ಧನ್ ಪಾಡಿವಾಳ, ನಗರ ಅಧ್ಯಕ್ಷ ಪುರಂದರ ದೇವಾಡಿಗ, ಮಹಿಳಾ ವಿಭಾಗದ ಸುಪ್ರಿಯಾ ಶೆಟ್ಟಿ, ಪದ್ಮ ಪ್ರಸಾದ್ ಹಾಗೂ ಇತರ ಮುಂದಾಳುಗಳು ಬಸ್ಸನ್ನು ಸ್ವಾಗತಿಸಿ ಸಂಭ್ರಮಪಟ್ಟರು.