ಮಂಗಳೂರು: ನಗರದ ಬೆಂಜಮಿನ್ ಮೆಮೊರಿಯಲ್ ಸ್ಪೋರ್ಟ್ಸ್ ಫೆಡರೇಷನ್ ಮತ್ತು ಸಂತ. ಅಲ್ಲಿಯೇ ಗೋನ್ಝಾಗ್ಹ ಸ್ಕೂಲ್ ಆಯೋಜಿಸಿದ ಬಾಸ್ಕೇಟ್ ಬಾಲ್ ಕ್ರೀಡಾಕೂಟದಲ್ಲಿ ಬಿಜೈನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಪ್ರೌಢ ವಿಭಾಗದ ಬಾಲಕರ ಮತ್ತು ಬಾಲಕಿಯರ ಹಾಗೂ ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರ ಪ್ರಥಮ ಸ್ಥಾನವನ್ನು ಗಳಿಸಿದೆ.
ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಆಳ್ವ ಇವರಿಗೆ ಶಾಲೆಯ ಸಂಚಾಲಕ ವಂ|ಧ| ಡಾ. ಜೆ.ಬಿ. ಸಲ್ಡಾನ ಮತ್ತು ಪ್ರಾಂಶುಪಾಲರಾದ ವಂ| ಧ| ಜಾನ್ಸನ್. ಎಲ್ ಸಿಕ್ವೇರಾ ಅಭಿನಂದನೆ ಸಲ್ಲಿಸಿದ್ದಾರೆ.