ಮಂಗಳೂರು, ಮಾ.11:  ಎನ್.ಸಿ.ಸಿ ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಇವರು ಎನ್‍ಸಿಸಿ ಬೆಟಾಲಿಯನ್‍ಗಳಿಗೆ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ  ನೇಮಿಸಿಕೊಳ್ಳಲು ಉದ್ದೇಶಿಸಿರುತ್ತಾರೆ. ಆಸಕ್ತ ಮಾಜಿ ಸೈನಿಕರು (ಅಕ್ಟೋಬರ್ 2022ರ ನಂತರ ನಿವೃತ್ತಿ ಹೊಂದಿದವರು) ಎನ್‍ಸಿಸಿ ನಿರ್ದೇಶನಾಲಯ ನಿರ್ದೇಶನದಂತೆ ಅನುಬಂಧ 1,2 ಮತ್ತು 3ನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಪಡೆದು ಭರ್ತಿ ಮಾಡಿ ವೆಬ್‍ಸೈಟ್‍ jtdirpc.Kardte@nccindia.nic ನಲ್ಲಿ ಸಲ್ಲಿಸಬಹುದು.

 ಹೆಚ್ಚಿನ ಮಾಹಿತಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ದೂರವಾಣಿ ಸಂಖ್ಯೆ : 0824-2450933 ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.