ಮಂಗಳೂರು, ಸೆಪ್ಟೆಂಬರ್ 25:  ಜ್ಞಾನಗಂಗ ಸಾಹಿತ್ಯ ರಂಗ(ರಿ) ಬೆಂಗಳೂರು ಕರುನಾಡ ಹಣತೆ ಕಲಾ ಬಳಗ ಸಾಂಸ್ಕೃತಿಕ ತಂಡ ಚಿತ್ರದುರ್ಗ ಇವರ ವತಿಯಿಂದ ನಡೆಸಲಾದ ಪ್ರಥಮ ಕವಿ‌ ಕಲಾವಿದ ಸಮ್ಮೇಳನ - 22  ರಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ, ಮೂಲವ್ಯಾಧಿ ಕ್ಷಾರ ಚಿಕಿತ್ಸಾ ತಜ್ಞ, ಪ್ರಾಧ್ಯಾಪಕ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ವೈದ್ಯಕೀಯ, ಸಾಹಿತ್ಯ ಸಂಘಟನೆ ಮತ್ತು ಸೇವಾಕಾರ್ಯಗಳನ್ನು ಗುರುತಿಸಿ ಪ್ರತಿಷ್ಠಿತ  "ನಾಡಪ್ರಭು ಕೆಂಪೇಗೌಡ ಸೇವಾ ರತ್ನ " ರಾಷ್ಟ್ರೀಯ ಪ್ರಶಸ್ತಿಯನ್ನು ದಿನಾಂಕ 25 ರ ಸೆಪ್ಟೆಂಬರ್ 2022 ಭಾನುವಾರದಂದು ಬೆಂಗಳೂರಿನಲ್ಲಿ ಶೇಷಾದ್ರಿಪುರಂನಲ್ಲಿರುವ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಯಿತು.

ಮಣ್ಣೆ ಮೋಹನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕೃತಿಗಳ ಬಿಡುಗಡೆ, ವಿಚಾರ ಗೋಷ್ಠಿ, ಕವಿಗೋಷ್ಠಿ- ಮತ್ತು ಇತರ ಹಲವರಿಗೆ ಸಾಧಕ ಸನ್ಮಾನಗಳೂ ನಡೆದವು. ಸಂಸ್ಥಾಪಕ ಅಧ್ಯಕ್ಷ ಕನಕ‌ ಪ್ರೀತೀಶ ರವರ ಸಾರಥ್ಯದ ಈ ಸಮಾರಂಭದಲ್ಲಿ ಹಲವು ಗಣ್ಯರೂ , ಸಾಹಿತಿಗಳೂ ಭಾಗವಹಿಸಿದ್ದರು. ಕಿಕ್ಕಿರಿದ ಜನ ಸಂದಣಿ ಜೊತೆಗೆ ಸಮಾರಂಭವು ಯಶಸ್ವಿಯಾಗಿ ನೆರವೇರಿತು ಎಂದು ರಾಜ್ಯಾಧ್ಯಕ್ಷ  ಎಸ್ ರಾಜು ಸೂಲೇನ ಹಳ್ಳಿಯವರು ತಿಳಿಸಿರುತ್ತಾರೆ.