ಮಂಗಳೂರು / ಚಿತ್ರಾಪುರ, ಸೆಪ್ಟೆಂಬರ್ 25 : ಸಾಹಿತ್ಯವು ಮುಂದಿನ ಪೀಳಿಗೆಗೆ ಆ ಕಾಲಮಾನದ ಚರಿತ್ರೆಯನ್ನು ತಿಳಿಸುವ ಒಂದು ಪ್ರಮುಖವಾದ ಸೇತುವೆಯಾಗಿದೆ. ಇದನ್ನು ಮನೆ ಮನೆಗಳಲ್ಲಿ ಮಾಡುವುದು ಬಹಳ ಸೂಕ್ತವಾಗಿದೆ ಎಂದು ಹಿರಿಯ ಪತ್ರಕರ್ತ ,ಬಹುಭಾಷಾ ಕವಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಮಂಗಳೂರು ಬೈಕಂಪಾಡಿಯ ಚಿತ್ರಾಪುರದಲ್ಲಿ ತಲಪಾಡಿ ಕೃಷ್ಣ ಭಟ್ ವೇದಿಕೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಆಯೋಜಿಸಿದ್ದಮನೆ ಮನಗಳಲ್ಲಿ ಸಾಹಿತ್ಯ ಸಂಭ್ರಮ ಮತ್ತು ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಕವಿ ಹಾಗೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಮ್ ಆರ್ ವಾಸುದೇವ ಅವರು ಮಾತನಾಡಿ ಬೆಳದಿಂಗಳ ಸಮ್ಮೇಳನಗಳ ಮೂಲಕ ಮಾದರಿಯಾದ ಅಜೆಕಾರು ಮನೆಯ ಅಂಗಳದಲ್ಲಿ ಯಶಸ್ವಿಯಾಗಿ ಕವಿ ಗೋಷ್ಟಿ ನಡೆಸಿ ಮಾದರಿಯಾಗಿದ್ದಾರೆ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಬೀಚ್ ಅಭಿವೃದ್ಧಿ ಸಮಿತಿಯ ಮಾಜಿ ಅದ್ಯಕ್ಷರಾದ ಯತೀಶ್ ಬೈಕಂಪಾಡಿ ಶುಭಹಾರೈಸಿದರು. ಉದಯೋನ್ಮುಖ ಕವಯತ್ರಿ ಸಿಹಾನ ಬಿ.ಎಂ ಉಳ್ಳಾಲ ಉದ್ಘಾಟನಾ ಕವಿತೆ ಓದಿ ಮಹಿಳೆಯರ ತುಡಿತದ ಬಗೆಗೆ ಗಮನ ಸೆಳೆದರು. ಬಾಲ ಪ್ರತಿಭೆ ಸಾನ್ವಿ ಭಟ್ ಚಿತ್ರಾಪುರ ವಿಶೇಷ ಅತಿಥಿಗಳಾಗಿದ್ದರು. ಕಾರ್ಯಕ್ರಮ ಆಯೋಜಕರಾದ ಡಾ.ಶೇಖರ ಅಜೆಕಾರು ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು.
ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಅಜೆಕಾರು ಧನ್ಯವಾದ ನೀಡಿದರು, ಪ್ರಿಯಾ ಸುಳ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕವಿಗಳಾದ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು,ವೀರಣ್ಣ ಕುರುವತ್ತಿ ಗೌಡರ್, ಪಂಕಜ್ ಸವಣೂರು, ಸಿಹಾನ ಬಿ.ಎಂ ಉಳ್ಳಾಲ, ಕಾರ್ತಿಕ್ ರಾವ್ , ಪ್ರಿಯಾ ಸುಳ್ಯ, ವಿಶ್ವೇಶ್ವರ ಕುರುವತ್ತಿಗೌಡರ್, ಸುನಿಧಿ ಅಜೆಕಾರು ಭಾಗವಹಿಸಿದರು, ರಾಜೇಶ್ ಭಟ್ ಸಹಕರಿಸಿದರು.