ಮಂಗಳೂರು:  ದಕ್ಷಿಣ ಕನ್ನಡ  ಸರ್ಕಾರಿ ನೌಕರರ ಸಂಘದ  ಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣಪ್ಪ ಅವರು ಮೇ ತಿಂಗಳಾಂತ್ಯದಲ್ಲಿ  ಸರಕಾರಿ ಸೇವೆಯಿಂದ ನಿವೃತ್ತಿ ಹೊಂದುವ ಹಿನ್ನೆಲೆಯಲ್ಲಿ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿ.ಷಡಾಕ್ಷರಿ ಅವರು  ಮಂಗಳವಾರ (21-05-2024) ಸರಕಾರಿ ನೌಕರರ ಸಂಘದ ನಂದಿನಿ ಸಭಾಂಗಣದಲ್ಲಿ ಸನ್ಮಾನಿಸಿದರು. 

ಈ ಸಂಧರ್ಭ  ವೇದಿಕೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಮಲ್ಲಿಕಾರ್ಜುನ್, ರುದ್ರಪ್ಪ, ಬಸವರಾಜ್, ಗಣೇಶ್, ಶಶಿಕುಮಾ‌ರ್, ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಗಣೇಶ್ ರಾವ್, ಖಾಚಂಚಿ ನವೀನ್ ಕುಮಾರ್  ಎಂ.ಎಸ್, ಲಿಲ್ಲಿ ಪಾಯಸ್, ಮತ್ತು  ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು