ಮಂಗಳೂರು, ಫೆ. 4: ಸೋಮೇಶ್ವರ ಪುರಸಭೆ ಡೇ-ನಲ್ಮ್‍ ಅಭಿಯಾನದಡಿಯಲ್ಲಿ ರಚಿಸಲಾಗಿರುವ ಅರ್ಹ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ತೊಡಗಿಸಿಕೊಂಡು ಆಸ್ತಿತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿ/ಸಂಗ್ರಹಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡೇ-ನಲ್ಮ್‍ ಯೋಜನೆಯಡಿಯಲ್ಲಿ ರಚಿಸಲಾಗಿರುವ ಉಳಿತಾಯ ಗುಂಪುಗಳಲ್ಲಿನ ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣವನ್ನು ಹಾಗೂ ಎಲೆಕ್ಟ್ರಾನಿಕ್ ಪರಿಕರಗಳನ್ನು ಬಳಸುವ ಸಾಮಥ್ರ್ಯವನ್ನು ಹೊಂದಿರಬೇಕು. ಹೆಚ್ಚಿನ ವಿದ್ಯಾಬ್ಯಾಸ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ. ಇಚ್ಛೆಯುಳ್ಳಂತಹ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಫೆಬ್ರವರಿ 12 ರಂದು ಸಂಜೆ 5 ಗಂಟೆಯೊಳಗಡೆ ತಮ್ಮ ಮಾಹಿತಿಗಳನ್ನು ಸೋಮೇಶ್ವರ ಪುರಸಭೆ ಕಾರ್ಯಾಲಯದಲ್ಲಿರುವ ನಗರ ಬಡತನ ನಿರ್ಮೂಲನ ಕೋಶದ ಡೇ-ನಲ್ಮ್ ಶಾಖೆಗೆ ಸಂಪರ್ಕಿಸುವಂತೆ ಸೋಮೇಶ್ವರ ಪುರಸಭೆ ಮುಖ್ಯಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.